Home » ಕಾರಣಿಕ ದೈವಗಳ ನೆಲೆಬಿಡು ಕಳಿಬೈಲು ಶ್ರೀಕ್ಷೇತ್ರ
 

ಕಾರಣಿಕ ದೈವಗಳ ನೆಲೆಬಿಡು ಕಳಿಬೈಲು ಶ್ರೀಕ್ಷೇತ್ರ

ಡಾ.ವಿದ್ವಾನ್ ವಿಜಯ ಮಂಜರ್

by Kundapur Xpress
Spread the love

ಕೋಟ: ಇಲ್ಲಿನ ಶ್ರೀ ಕ್ಷೇತ್ರ ಕಾರಣಿಕ ದೈವ ದೇವರುಗಳ ನೆಲೆಬಿಡಾಗಿ ಕಂಗೊಳಿಸುತ್ತಿದೆ ಎಂದು  ಪಾಂಡೇಶ್ವರದ ಯೋಗ ಗುರುಕುಲದ ಮುಖ್ಯಸ್ಥ  ವಿದ್ವಾನ್ ಡಾ.ವಿಜಯ್ ಮಂಜರ್ ನುಡಿದರು.

ಶುಕ್ರವಾರ ಶ್ರೀ ಕ್ಷೇತ್ರ ಕಳಿಬೈಲು ತುಳಸಿ ಅಮ್ಮ,ಶಿರಸಿ ಮಾರಿಕಾಂಬೆ,ಪಂಜುರ್ಲಿ ಮತ್ತು ಸ್ಚಾಮಿ ಕೊರಗಜ್ಜ ಸಪರಿವಾರ ದೇವಸ್ಥಾನದ ಇದರ ಕಳಿಬೈಲು ನೇಮೋತ್ಸವದ ಧಾರ್ಮಿಕ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಿ ಯಾವ ಕಾಲಕ್ಕೆ ದೈವದೇವರುಗಳು ಅವತರಿಸಿಕೊಳ್ಳಬೇಕೊ ಅಂದೆ ಸಂದರ್ಭಕ್ಕೆ ಕೆಲ ವ್ಯಕ್ತಗಳ ಮೂಲಕ ಆ ಶಕ್ತಿ ಹೊರಜಗತ್ತಿಗೆ ಪಸರಿಸಿಕೊಳ್ಳುತ್ತದೆ ಅದೇ ರೀತಿ ಇಂದು ಪಾಂಡೇಶ್ವರದ ಕಳಿಬೈಲು ಭಕ್ತರ ಇಷ್ಟಾರ್ಥಗಳನ್ನು ಇಡೆರಿಸುವ ತಾಣವಾಗಿ ಮೂಡಿದೆ.ದೈವ ದೇವರುಗಳನ್ನು ಕಾಟಚಾರಕ್ಕೆ ನಂಬುವ ಅಥವಾ ಹೋಗುವ ಪರಿಪಾಠ ಒಳ್ಳೆದಲ್ಲ ಯಾವುದೋ ಉದ್ದೇಶವಿರಿಸಿ ಹೋಗುವುದು ಅಥವಾ ವ್ಯವಹಾರಿಕವಾಗಿ  ಮಾಡಿಕೊಳ್ಳುವ ತಾಣವಾಗಬಾರದು ಬದಲಾಗಿ ದೃಢಭಕ್ತಿಯಿಂದ ದೇವರ ಧ್ಯಾನವನ್ನು ಮಾಡಬೇಕು ಆಗ ಶ್ರೀ ದೇವರು ನಮ್ಮ ಇಷ್ಟಾರ್ಥಗಳಿಗೆ ಸ್ಪಂದಿಸುತ್ತಾನೆ,ತನ್ಮೂಲಕ  ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಭೆಯ ಅಧ್ಯಕ್ಷತಯನ್ನು ಶ್ರೀ ಕ್ಷೇತ್ರದ ಮುಖ್ಯಸ್ಥ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.

ಇದೇ ವೇಳೆ  ಕಳಿಬೈಲು ಕಂಬಳರತ್ನ ಪುರಸ್ಕಾರವನ್ನು ಬಿ.ಶಾಂತರಾಮ್ ಶೆಟ್ಟಿ, ಸಹಕಾರರತ್ನ ಪುರಸ್ಕಾರವನ್ನು ಜೋಜ್ ಎಸ್ ಫರ್ನಾಂಡೀಸ್, ಜೀವರಕ್ಷಕ ಪುರಸ್ಕಾರವನ್ನು ಈಶ್ವರ ಮಲ್ಪೆ,ಭಜನಾಸೇವಾ ಪುರಸ್ಕಾರವನ್ನು ವಾಸುದೇವ ಹಂಗಾರಕಟ್ಟೆ,ರಂಗರತ್ನ ಪರಸ್ಕಾರವನ್ನು ಶ್ರೀಮತಿ ಸುಜಾತ ಅಲ್ವಿನ್ ಆಂದ್ರಾದೆ  ದಂಪತಿಗಳಿಗೆ ನೀಡಲಾಯಿತು.ಕಳಿಬೈಲ್ ಕಿಂಗ್ ಕುಟ್ಟಿ ಕಂಬಳದ ಶ್ರೇಷ್ಠ ಒಟದ ಕೋಣ ಬಾರ್ಕೂರು ಕುಟ್ಟಿಗೆ ವಿಶೇಷ ಪುರಸ್ಕಾರ ನೀಡಲಾಯಿತು.

ಮುಖ್ಯ ಅಭ್ಯಾಗತರಾಗಿ ಐರೋಡಿ ಮಹಾಕಾಳಿ ದೇಗುಲದ ಅಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ,ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್,ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ವಿದ್ಯುತ್ ಗುತ್ತಿಗೆದಾರ ದಯಾನಂದ ಪೂಜಾರಿ,ಶ್ರೀ ಕ್ಷೇತ್ರದ ಪಾತ್ರಿಗಳಾದ ನವಿನ್ ಗುರುಗಳು,ಗೌರವ ಸಲಹೆಗಾರ ಶಶಿಧರ ರಾವ್,ಬೆಣ್ಣೆಕುದ್ರು ಉದ್ಯಮಿ ಸತೀಶ್ ಪೂಜಾರಿ,ಪಾಂಡೇಶ್ವರ ಪಂಚಾಯತ್ ಸದಸ್ಯ ರವೀಶ್ ಶ್ರೀಯಾನ್, ವಿಠ್ಠಲ ಪಾತ್ರಿ,ಕಂಬಿಗಾರ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮಟಪಾಡಿ ಮುಕ್ತೇಸರ ವಿಶ್ವನಾಥ ಶೆಟ್ಟಿ, ವೇ.ಮೂ ರಮೇಶ್ ಭಟ್,ರೈಲ್ವೆ ಇಲಾಖೆಯ ಇಂಜಿನಿಯರ್ ಶರೀತಾ ವಿಕಾಸ್ ಕುಮಾರ್ ಉಪಸ್ಥಿತರಿದ್ದರು. ದೇಗುಲದ ಪ್ರಧಾನಾರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ,ಮಂಜುನಾಥ ಹಿಲಿಯಾಣ ನಿರೂಪಿಸಿದರು. ನಿರೂಪಕ ಶ್ರೀಶ ಆಚಾರ್ ವಂದಿಸಿದರು.ಶ್ರೀ ಕ್ಷೇತ್ರ ಕಳಿಬೈಲು ತುಳಸಿ ಅಮ್ಮ,ಶಿರಸಿ ಮಾರಿಕಾಂಬೆ,ಪಂಜುರ್ಲಿ ಮತ್ತು ಸ್ಚಾಮಿ ಕೊರಗಜ್ಜ ಸಪರಿವಾರ ದೇವಸ್ಥಾನದ ಇದರ ಕಳಿಬೈಲು ನೇಮೋತ್ಸವದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಕಳಿಬೈಲು ಕಂಬಳರತ್ನ ಪುರಸ್ಕಾರವನ್ನು ಬಿ.ಶಾಂತರಾಮ್ ಶೆಟ್ಟಿ, ಸಹಕಾರರತ್ನ ಪುರಸ್ಕಾರವನ್ನು ಜೋಜ್9 ಎಸ್ ಫರ್ನಾಂಡೀಸ್, ಜೀವರಕ್ಷಕ ಪುರಸ್ಕಾರವನ್ನು ಈಶ್ವರ ಮಲ್ಪೆ,ಭಜನಾಸೇವಾ ಪುರಸ್ಕಾರವನ್ನು ವಾಸುದೇವ ಹಂಗಾರಕಟ್ಟೆ,ರಂಗರತ್ನ ಪರಸ್ಕಾರವನ್ನು ಶ್ರೀಮತಿ ಸುಜಾತ ಅಲ್ವಿನ್ ಆಂದ್ರಾದೆ  ದಂಪತಿಗಳಿಗೆ ನೀಡಲಾಯಿತು ಐರೋಡಿ ಮಹಾಕಾಳಿ ದೇಗುಲದ ಅಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ,ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್. ಶ್ರೀ ಕ್ಷೇತ್ರದ ಮುಖ್ಯಸ್ಥ ಎಂ.ಸಿ ಚಂದ್ರಶೇಖರ್ ಮತ್ತಿತರರು ಇದ್ದರು.

   

Related Articles

error: Content is protected !!