ಪಾಂಡೇಶ್ವರ : ಶರನ್ನವರಾತ್ರಿ ನಾಲ್ಕನೇ ದಿನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೇಳಿಕೆ
ಕೋಟ: ಕಳಿಬೈಲು ಸಾನಿಧ್ಯವೇ ತನ್ನದೇ ಆದ ಭಕ್ತಸಂಕುಲವನ್ನು ಹೊಂದಿಕೊಂಡಿದ್ದು ಭಕ್ತರ ಇಷ್ಟಾರ್ಥ ನಿಗಿಸುವ ತಾಣವಾಗಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ ಹೇಳಿದರು.
ಪಾಂಡೇಶ್ವರ ಮೂಡಹಡು ಕಳಿಬೈಲು ಶ್ರೀ ಶಿರಸಿ ಅಮ್ಮ, ತಳಸಿ ದೇವಿ,ಕೊರಗಜ್ಜನ ಸಾನಿಧ್ಯ ಪರಿವಾರ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ನಾಲ್ಕನೇ ದಿನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯಾವುದೇ ಕ್ಷೇತ್ರ ಬೆಳೆಯಬೇಕಾದರೆ ಅಲ್ಲಿನ ಕಾರಣಿಕತೆ ಅಷ್ಟೆ ಮಹತ್ವ ಪಡೆಯುತ್ತದೆ ಅದರ ತಳಹದಿಯಲ್ಲಿ ಭಕ್ತಸಮುದಾಯದ ಭಕ್ತಿಯ ಕೇಂದ್ರವಾಗಲು ಸಾಧ್ಯ ಈ ದಿಸೆಯಲ್ಲಿ ಕಳಿಬೈಲು ಕ್ಷೇತ್ರ ತನ್ನದೆ ಆದ ಭಕ್ತಿಯ ಕೇಂದ್ರ ಸ್ಥಾನವಾಗಿ ರೂಪುಗೊಂಡಿದೆ,ಶರನ್ನವರಾತ್ರಿ ವಿವಿಧ ಧಾರ್ಮಿಕ ಕೈಂಕರ್ಯ ,ಸಾಂಸ್ಕೃತಿಕ ಭಜನಾ ಕಮ್ಮಟಗಳು ಭಗವಂತನನ್ನು ಅತಿ ಹತ್ತಿರದಲ್ಲಿ ಸಮೀಪಿಸುವ ಸಾಧನವಾಗಿದೆ ಎಂದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಗುಲದ ಮುಕ್ತೇಸರ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಕಲಸ್9 ಕನ್ನಡ ಚಾನಲ್‍ನ ಗಿಚ್ಚಿಗಿಲಿಗಿಲಿ ಖ್ಯಾತಿ ದಿಕ್ಷಾ ಬ್ರಹ್ಮಾವರ ಇವರನ್ನು ಗೌರವಿಸಲಾಯಿತು
ಮುಖ್ಯ ಅಭ್ಯಾಗತರಾಗಿ ಹುಬ್ಬಳ್ಳಿ ವಿಭಾಗದ ರೈಲೆ ಇಂಜಿನಿಯರ್ ಸರಿತಾ ವಿಕಾಸ್ ಕುಮಾರ್,ಉದ್ಯಮಿ ಗೌರೀಶ್ ಆಚಾರ್,ಹಿರಿಯ ಅರ್ಚಕ ಸುರೇಶ್ ಉದ್ಯಾವರ,ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡದ ಸಂಚಾಲಕಿ ಗೀತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಶ ಆಚಾರ್ ಕಾರ್ಯಕ್ರಮ ನಿರೂಪಿಸಿದರೆ ದೇಗುಲದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ವಂದಿಸಿದರು.
ದುರ್ಗಾಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ನಾಯರಬೆಟ್ಟು ವೇ.ಮೂ
ರಮೇಶ್ ಭಟ್ ನೆರವೆರಿಸಿದರು. ವಿವಿಧ ದೈವ ದೇವರುಗಳ ದರ್ಶನ ಸೇವೆ ಕಾರ್ಯಕ್ರಮಗಳು ಜರಗಿದವು.
ಅಪರಾಹ್ನ ನಡೆದ ಮಹಾಅನ್ನಸಂತರ್ಪಣೆ ಕಾರ್ಯಕ್ರಮಯಲ್ಲಿ ನೂರಾರು ಭಕ್ತರು ಭಾಗಿಯಾದರು.ನಂತರ ನಡೆದ ಭಜನಾ ಕಾರ್ಯಕ್ರಮದಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಪಾಂಡೇಶ್ವರ ಮೂಡಹಡು ಕಳಿಬೈಲು ಶ್ರೀ ಶಿರಸಿ ಅಮ್ಮ ತಳಸಿ ದೇವಿ,ಕೊರಗಜ್ಜನ ಸಾನಿಧ್ಯ ಪರಿವಾರ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ನಾಲ್ಕನೇ ದಿನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಕಲಸ್9 ಕನ್ನಡ ಚಾನಲ್ ನ ಗಿಚ್ಚಿಗಿಲಿಗಿಲಿ ಖ್ಯಾತಿ ದಿಕ್ಷಾ ಬ್ರಹ್ಮಾವರ ಇವರನ್ನು ಗೌರವಿಸಲಾಯಿತು. ದೇಗುಲದ ಮುಕ್ತೇಸರ ಎಂ.ಸಿ ಚಂದ್ರಶೇಖರ್, ಹುಬ್ಬಳ್ಳಿ ವಿಭಾಗದ ರೈಲೆ ಇಂಜಿನಿಯರ್ ಸರಿತಾ ವಿಕಾಸ್ ಕುಮಾರ್,ಉದ್ಯಮಿ ಗೌರೀಶ್ ಆಚಾರ್,ಹಿರಿಯ ಅರ್ಚಕ ಸುರೇಶ್ ಉದ್ಯಾವರ ಮತ್ತಿತರರು ಉಪಸ್ಥಿತರಿದ್ದರು.