Home » ಕೊಲ್ಲೂರಿನಲ್ಲಿ ಮಹಾರಥೋತ್ಸವ
 

ಕೊಲ್ಲೂರಿನಲ್ಲಿ ಮಹಾರಥೋತ್ಸವ

by Kundapur Xpress
Spread the love

ಕುಂದಾಪುರ: ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರು, ಶ್ರೀ ಮೂಕಾಂಬಿಕಾ ದೇವಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ವೈಭವದ ಶ್ರೀ ಮನ್ಮಹಾ ರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.ದೇವಳದ ತಂತ್ರಿ, ಪ್ರಧಾನ ಅರ್ಚಕ ಡಾ.ಕೆ.ನಿತ್ಯಾನಂದ ಅಡಿಗರ ನೇತೃತ್ವದಲ್ಲಿ ಮುಹೂರ್ತ ಮಂಗಳಾರತಿ, ಪಂಚಾಮೃತ ಅಭಿಷೇಕ, ಕ್ಷಿಪ್ರ ಬಲಿ, ವಿಶೇಷ ಭೂತಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ಜರುಗಿತು. ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಮಧ್ಯಾಹ್ನ ದೇವಳದ ಭೋಜನ ಶಾಲೆಯಲ್ಲಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆಯುವ ಹಾಗೂ ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಸಂಭ್ರಮಿಸಿದರು ಸುಮಾರು ೨೦ ವರ್ಷ ನಂತರ ೧೧ ದಿನಗಳ ಕಾಲ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಏ.೩೦ ರಂದು ಆರಂಭಗೊAಡಿದ್ದು, ಮೇ ೧೧ ರಂದು ಸಂಪನ್ನಗೊಳ್ಳಲಿದೆ. ಕೊಲ್ಲೂರು ಕ್ಷೇತ್ರದ ಅಧಿದೇವತೆ ಹಾಗೂ ಗ್ರಾಮ ದೇವತೆ ಶ್ರೀ ಮೂಕಾಂಬಿಕಾ ಅಮ್ಮನವರ ರಥೋತ್ಸವಕ್ಕೆ ಮೇ ೨ ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ಊರಿನ ಹತ್ತು ಸಮಸ್ತರು, ಭಕ್ತಾಧಿಗಳು ಸೇರಿ ಅಂಗಡಿ ಮುಂಗಟ್ಟು ಮನೆ, ಬೀದಿಗಳನ್ನು ವಿಶೇಷ ವಿದ್ಯುದ್ವೀಪಗಳಿಂದ ಅಲಂಕರಿಸಿದ್ದರು.

ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾರ್ಗದರ್ಶನದಲ್ಲಿ ದೇವಳದ ಪ್ರಭಾರ ಕರ‍್ಯನಿರ್ವಹಣಾಧಿಕಾರಿ ಎಸ್.ಸಿ. ಕೊಟಾರಗಸ್ತಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರ ಶೇಖರ ಶೆಟ್ಟಿ, ಸದಸ್ಯರಾದ ಜಯಾನಂದ ಹೋಬಳಿದಾರ್, ಗಣೇಶ ಕಿಣಿ ಬೆಳ್ವೆ, ಡಾ. ಅತುಲ್ ಕುಮಾರ್ ಶೆಟ್ಟಿ, ಕೆ.ಪಿ. ಶೇಖರ್, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ ಕುಂದರ್ ಉಸ್ತುವಾರಿ ವಹಿಸಿದ್ದರು. ದೇವಳದ ಸಹಾಯಕ ಕರ‍್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ್, ಅರ್ಚಕ ವೃಂದ, ದೇವಳದ ಹಾಗೂ ಗ್ರಾ.ಪಂ.ನ ಸಿಬ್ಬಂದಿ ಜಾತ್ರೆಯ ಯಶಸ್ಸಿಗೆ ಸಹಕರಿಸಿದ್ದರು. ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ ನೇತೃತ್ವದಲ್ಲಿ ಕೊಲ್ಲೂರು ಠಾಣಾಧಿಕಾರಿ ಈರಣ್ಣ ಶಿರಗುಂಪಿ ಮತ್ತು ಸುಧಾರಾಣಿ ನೇತೃತ್ವದಲ್ಲಿ ಪೊಲೀಸ್  ಬಂದೋಬಸ್ತ್ ಮಾಡಲಾಗಿತ್ತು. ದಾರಿಯುದ್ಧಕ್ಕೂ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.

 

   

Related Articles

error: Content is protected !!