ಕೊಲ್ಲೂರು : ಜಸ್ಟೀಸ್ ಬಿ ಎಸ್ ಪಾಟೀಲ್ ರಾಜ್ಯ ಲೋಕಾಯುಕ್ತರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಭೇಟಿ ನೀಡಿ ತಾಯಿ ಮೂಕಾಂಬಿಕೆ ದರ್ಶನ ಪಡೆದು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ ಬಾಬು ಹೆಗ್ಡೆ ಶ್ರೀ ದೇವಿಯ ಪ್ರಸಾದ ಹಾಗೂ ಸ್ಮರಣಿಕೆ ನೀಡಿ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ವ್ಯವಸ್ಥಾಪನ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ, ಧನಾಕ್ಷಿ ಪೂಜಾರಿ, ಮಾಲಿಂಗ ನಾಯ್ಕ್ ಉಪಸ್ಥಿತರಿದ್ದರು