Home » ಇಂದು ಆನೆಗುಡ್ಡೆಯಲ್ಲಿ ಅಂಗಾರಕ ಸಂಕಷ್ಟಿ
 

ಇಂದು ಆನೆಗುಡ್ಡೆಯಲ್ಲಿ ಅಂಗಾರಕ ಸಂಕಷ್ಟಿ

by Kundapur Xpress
Spread the love

ಕುಂಭಾಸಿ : ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪಂಚಾಂಗದ ಪ್ರಕಾರ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಇಂದು ಮಾ.18ರಂದು ಅಂಗಾರಕ ಸಂಕಷ್ಟಿ ನಡೆಯಲಿದೆ.

ಈ ಪ್ರಯುಕ್ತ ಬೆಳಗ್ಗೆ 5.00 ಗಂಟೆಗೆ ಪ್ರಾತಪೂಜೆ, 11.30ಕ್ಕೆ ಪಂಚಾಮೃತ ಅಭಿಷೇಕ ಪೂರ್ವಕ ಉಪನಿಷತ್ ಕಲಶಾಭಿಷೇಕ, 12 ಗಂಟೆಗೆ ಸಹಸ್ರನಾರಿಕೇಳ ಗಣಹೋಮದ ಪೂರ್ಣಾಹುತಿ, ಮಧ್ಯಾಹ್ನ 1.00 ಗಂಟೆಗೆ ಸತ್ಯ ಗಣಪತಿ ವೃತ ಕಲ್ಲೋಕ್ತ ಪೂಜಾ ಸಹಿತ ಮಹಾಪೂಜೆ ನಡೆಯಲಿದೆ. ರಾತ್ರಿ 8.00 ಗಂಟೆಗೆ ಸಾಮೂಹಿಕ ಮಹಾ ರಂಗಪೂಜಾ ಹಾಗೂ ರಜತ ಪಲ್ಲಕ್ಕಿ ಮತ್ತು ರಜತ ರಥೋತ್ಸವ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ  ಅಂಗವಾಗಿ ಸಂಜೆ 5.30ರಿಂದ ಗಣೇಶ್ ಬೀಜಾಡಿ ಹಾಗೂ ಬಳಗದವರಿಂದ ದಾಸ ಗಾನಾಮೃತ ನಡೆಯಲಿದೆ ಎಂದು ದೇವಳದ ಆಡಳಿತ ಧರ್ಮದರ್ಶಿಗಳಾದ ಶ್ರೀರಮಣ ಉಪಾಧ್ಯಾಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!