Home » ಭಂಡಾರಕೇರಿ ಶ್ರೀಪಾದರಿಗೆ ಉಡುಪಿಯಲ್ಲಿ ಭವ್ಯ ಸ್ವಾಗತ
 

ಭಂಡಾರಕೇರಿ ಶ್ರೀಪಾದರಿಗೆ ಉಡುಪಿಯಲ್ಲಿ ಭವ್ಯ ಸ್ವಾಗತ

by Kundapur Xpress
Spread the love

ಉಡುಪಿ : ಮಾನವರ ದುಃಖ ಸಂಕಷ್ಟ ನಾಶಕ್ಕೆ ಭಾಗವತ ಸಹಕಾರಿ. ಅಂಥ ಗ್ರಂಥದ ಪಾರಾಯಣದಿಂದ ಶ್ರೇಯಸ್ಸು ಸಾಧ್ಯ ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ವೇಶತೀರ್ಥರು ಹೇಳಿದ್ದಾರೆ

ಪರ್ಯಾಯ ಪುತ್ತಿಗೆ ಸುಗುಣೇಂದ್ರತೀರ್ಥರ ಅಪೇಕ್ಷೆಯಂತೆ 37 ವರ್ಷದ ಬಳಿಕ ಉಡುಪಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲು ಬುಧವಾರ ಆಗಮಿಸಿದ್ದ ಶ್ರೀಪಾದರಿಗೆ ಪುತ್ತಿಗೆ ಮಠ ವತಿಯಿಂದ ರಾಜಾಂಗಣದಲ್ಲಿ ನಡೆದ ಭವ್ಯ  ಸ್ವಾಗತ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಯಾವುದೇ ಫಲಾಪೇಕ್ಷೆ ಇಲ್ಲದೇ ತಮ್ಮ ಚಾತುರ್ಮಾಸ್ಯ ಅವಧಿ ಯಲ್ಲಿ ಉಡುಪಿಯ ಮನೆ ಮನೆಗಳಿಗೆ ತೆರಳಿ  ಭಾಗವತ ಪ್ರಸಾರ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು, ಆಧ್ಯಾತ್ಮಿಕತೆಯಿಂದಷ್ಟೆ ಜೀವನ ಸಾರ್ಥಕ ಸಾಧ್ಯ ಎಂದರು ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಧೀಂದ್ರತೀರ್ಥರು ಆಶೀರ್ವಚನ ನೀಡಿದರು. ವಿದ್ವಾನ್ ಬಿದರಹಳ್ಳಿ ರಥೋತ್ತಮಾಚಾರ್ಯ ಅಭಿನಂದನಾ ಭಾಷಣ ಮಾಡಿದರು

ಚಾತುರ್ಮಾಸ್ಯ ಸ್ವಾಗತ ಸಮಿತಿಯ ಯು.ಬಿ. ಶ್ರೀನಿವಾಸ್ ಸ್ವಾಗತಿಸಿ, ವಿದ್ವಾನ್ ಡಾ. ಗೋಪಾಲಾಚಾರ್ಯ ನಿರೂಪಿಸಿದರು. ಶ್ರೀವಿದ್ವೇಶತೀರ್ಥರ ಪದಗಳನ್ನು ಪ್ರಸನ್ನ ಹಾಡಿದರು. ಮಠದ ದಿವಾನ ನಾಗರಾಜ್ ಆಚಾರ್ಯ, ಪ್ರಸನ್ನಚಾರ್ಯ, ರತೀಶ್ ತಂತ್ರಿ, ಪ್ರದೀಪಕುಮಾರ್ ಕಲ್ಕೂರ, ಸ್ವಾಗತ. ಸಮಿತಿಯ ಚಂದ್ರಶೇಖರ ಆಚಾರ್ಯ, ರಾಜೇಶ್ ಭಟ್, ಜಯರಾಮ ಆಚಾರ್ಯ, ರಮೇಶ್ ಭಟ್, ರವೀಂದ್ರಾಚಾರ್ಯ ವಿಷ್ಣುಪ್ರಸಾದ್ ಮೊದಲಾದವರಿದ್ದರು.

   

Related Articles

error: Content is protected !!