ಉಡುಪಿ : ಭಾರತಕ್ಕೆ ಇಂದು ಬೇಕಾಗಿರುವುದು ಕೃಷ್ಣನ ಆದರ್ಶಗಳು, ಕೃಷ್ಣನನ್ನು ಮತ್ತೆ ಮತ್ತೆ ಅಧ್ಯಯನ ಮಾಡುವುದು ಮತ್ತು ಆತನ ಆದರ್ಶಗಳಂತೆ ನಡೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಕರೆ ನೀಡಿದ್ದಾರೆ. ಅವರು ಬುಧವಾರ ಉಡುಪಿ ಕೃಷ್ಣಮಠದ ರಾಜಂಗಣದಲ್ಲಿ ಕೃಷ್ಣ ಜನ್ಮಾಷ್ಟಮಿ ಸಪ್ಪೋತ್ಸವದ ಕೊನೆಯ ದಿನದ ಧಾರ್ಮಿಕ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು
ಕೃಷ್ಣನನ್ನು ನಾವು ಮನೋರಂಜನೆಯ ಪಾತ್ರವಾಗಿ ನೋಡುತ್ತಿದ್ದೇವೆ. ಪುರಾಣಗಳು ಆತನನ್ನು ಪವಾಡ ಪುರುಷನನ್ನಾಗಿ ತೋರಿಸುತ್ತವೆ, ಆತ ತತ್ವಜ್ಞಾನಿಯಾಗಿದ್ದ ನಿಜ, ರಾಜತಾಂತ್ರಿಕನಾಗಿದ್ದುದೂ ನಿಜ, ಆದರೆ ಅದೆಲ್ಲಕ್ಕಿಂತ ಆತನೊಬ್ಬ ಮಹಾ ದಾರ್ಶನಿಕನಾಗಿದ್ದ, ತನ್ನ ಕಾಲಕ್ಕಿಂತ ಸಾವಿರ ವರ್ಷದ ನಂತರ ಸಂಭವಿಸುವುದನ್ನು ಆತ ಗೀತೆಯಲ್ಲಿ ಹೇಳಿದ್ದಾನೆ.ಭಾರತದಲ್ಲಿ ಅದೇ ನಡೆಯುತ್ತಿದೆ. ಆದ್ದರಿಂದ ಭಾರತಕ್ಕೆ ಈಗ ಬೇಕಾಗಿರುವುದು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವವರು ಹೊರತು ಸೋಮಾರಿಗಳಲ್ಲ ಎಂದವರು ಹೇಳಿದರು.