ಕುಂದಾಪುರ : ಕುಂದೇಶ್ವರ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಇದರ ಪಾವಿತ್ರ್ಯತೆ, ಹಿರಿಮೆ ಉಳಿಸಲು ಪ್ರಯತ್ನಿಸಲಾಗು ವುದು. ಹಿಂದಿನ ವ್ಯವಸ್ಥಾಪನಾ ಸಮಿತಿಯ ಉತ್ತಮ ಕಾರ್ಯಗಳಿಂದಾಗಿ ದೇವಾಲಯದ ಹೆಸರು ಎಲ್ಲೆಡೆ ಪಸರಿಸಿದೆ. ಸರಕಾರ ಬದಗಿಸಿಕೊಟ್ಟಿರುವ ಈ ಅವಕಾಶ ಬಳಕೆ ಮಾಡಿಕೊಂಡು ಭಕ್ತರಿಗೆ ಉತ್ತಮ ಸೇವೆ ನೀಡಲು ಬದ್ಧನಾಗಿದ್ದೇನೆ ಎಂದು ಕುಂದೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ವಾಸುದೇವ ಯಡಿಯಾಳ ಹೇಳಿದರು.
ದೇವಳದಲ್ಲಿ ಬುಧವಾರ ಜರುಗಿದ ನೂತನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತ ನಾಡಿದರು. ದೇವಳದ ಆಡಳಿತಾಧಿಕಾರಿ ಶೋಭಾ ಶೆಟ್ಟಿ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು