152
ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಬೆಳಿಗ್ಗೆ ದೇಗುಲದಲ್ಲಿ ಹೂವಿನ ಅಲಂಕಾರ ದೀಪಾಲಂಕಾರ ಹಾಗೂ ಶತರುದ್ರಾಭೀಷೇಕ ನಡೆಯಲಿದೆ ಮಧ್ಯಾಹ್ನ 01.00 ಗಂಟೆಗೆ ಮಹಾಪೂಜೆಯೊಂದಿಗೆ ಪ್ರಸಾದ ವಿತರಣೆಯಾಗಲಿದೆ
ಸಂಜೆ ರಂಗಪೂಜೆ ಪ್ರಸಾದ ವಿತರಣೆ ಹಾಗೂ ಮಧ್ಯರಾತ್ರಿ 12.00 ಗಂಟೆಗೆ ವಿಶೇಷ ಪೂಜೆ ಜರುಗಲಿದ್ದು ಭಕ್ತಾದಿಗಳು ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಮೈಲಾರೇಶ್ವರ ದೇವರ ಪೂರ್ಣಾನುಗ್ರಕ್ಕೆ ಪಾತ್ರರಾಗಬೇಕೆಂದು ದೇಗುಲದ ಆಡಳಿತಕಾರಿಗಳಾದ ಶ್ರೀ ಕಾಂತರಾಜ್ ತಿಳಿಸಿದ್ದಾರೆ

