ಕುಂದಾಪುರ : ನಗರದ ಇತಿಹಾಸ ಪ್ರಸಿದ್ದ ಶ್ರೀ ಕುಂದೇಶ್ವರ ದೇಗುಲದಲ್ಲಿ ಇಂದು ಮಹಾ ಶಿವರಾತ್ರಿಯ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಬೆಳಿಗ್ಗೆ 9.00 ರಿಂದ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಮಹಾಪೂಜೆ, ಹಾಗೂ ಪ್ರಸಾದ ವಿತರಣೆ ನಡೆಯಲಿದೆ
ಬೆಳಿಗ್ಗೆ ದೇವಸ್ಥಾನದ ವತಿಯಿಂದ ನಿರಂತರ ಉಚಿತ ಪ್ರಸಾದ ವಿತರಣೆ ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ (ರಿ) ಇವರಿಂದ ಅಖಂಡ ಭಜನಾ ಕಾರ್ಯಕ್ರಮ ಜರುಗಲಿದೆ
ಸಂಜೆ ಗಂಟೆ 5.30ರಿಂದ 7.30ರವರೆಗೆ ಶ್ರೀ ವೆಂಕಟೇಶ ವೈದ್ಯರ ನೇತೃತ್ವದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ. ಮಕ್ಕಳ ಮೇಳದವರಿಂದ ಯಕ್ಷಗಾನ “ಕೃಷ್ಣಾರ್ಜುನ ಕಾಳಗ” ಪ್ರದರ್ಶನಗೊಳ್ಳಲಿದೆ
ರಾತ್ರಿ ಗಂಟೆ 7.30ರಿಂದ 9.30ರವರೆಗೆ ನೃತ್ಯವಿದುಷಿ ಪ್ರವಿತಾ ಅಶೋಕ ಅವರ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ಎಂಬ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಲಿದೆ
ರಾತ್ರಿ ಗಂಟೆ 9.30ರಿಂದ ಶ್ರೀ ಕುಂದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ರಂಗಪೂಜೆ , ಮಹಾಮಂಗಳಾರತಿ , ಪ್ರಸಾದ ವಿತರಣೆ ನಡೆಯಲಿದ್ದು ಭಕ್ತರು ಆಗಮಿಸಿ ಶ್ರೀ ಕುಂದೇಶ್ವರನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಾಸದೇವ ಯಡಿಯಾಳ್ ಹಾಗೂ ದೇಗುಲದ ವ್ಯವಸ್ಥಾಪನ ಸಮಿತಿಯ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ

