Home » ನಂದಿಕೇಶ್ವರ ದೇವಸ್ಥಾನದ ಶಿಲಾನ್ಯಾಸ
 

ನಂದಿಕೇಶ್ವರ ದೇವಸ್ಥಾನದ ಶಿಲಾನ್ಯಾಸ

by Kundapur Xpress
Spread the love

ಕುಂದಾಪುರ: ಕುಂದಾಪುರ ನಗರದ  ಸಾರ್ವಜನಿಕ ಆಸ್ಪತ್ರೆ ವಠಾರದಲ್ಲಿರುವ ಪ್ರಾಚೀನ ನಂದಿಕೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠೆಯ ಅಂಗವಾಗಿ ಸೋಮವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಂತ್ರಿಗಳಾದ ರಾಜಾರಾಮ ಸೋಮಯಾಜಿ ಹಾಗೂ ಮಂಜುನಾಥ ಭಟ್ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು.

ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್ ನಿರ್ಮಾಣಗೊಳ್ಳಲಿರುವ ದೇವಸ್ಥಾನದ ಶಿಲಾನ್ಯಾಸವನ್ನು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದ‌ರ್, ಕುಂದಾಪುರ ಶಾಸಕ ಕಿರಣ್ ಕುಮಾರ ಕೊಡ್ಗಿ ಸಹಿತ ಗಣ್ಯರು ಶಿಲಾನ್ಯಾಸ ನೆರವೇರಿಸಿದರು

ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಯು.ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕೋಶಾಧಿಕಾರಿ ಬಿ.ಎಂ.ಚಂದ್ರಶೇಖರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ನಾಗೇಶ್, ವೆಂಕಟರಮಣ ಆರ್ಕೆಡ್ ಮಾಲೀಕ ಕೊತ್ವಾಲ್ ಶೇಷಯ್ಯ ಶೇರೆಗಾರ್, ಸ್ಥಳೀಯ ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ, ವ್ಯವಸ್ಥಾಪನಾ ಮತ್ತು ಜೀರ್ಣೋದ್ದಾರ ಸಮಿತಿ ಸರ್ವ ಸದಸ್ಯರು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ

ಮೈಲಾರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್‌ ಬಿಲ್ಲವ ಫೆಂಡ್ಸ್‌ ಸರ್ಕಲ್‌ ಇದರ ಅಧ್ಯಕ್ಷರಾದ ನಾಗರಾಜ ಖಾರ್ವಿ ಮನೋಹರ ಯು ಕೆ ಅನಿಲ್‌ ಕುಮಾರ್ ಮಂಗಳೂರು ಬಿಜೆಪಿ ಸಹ ಪ್ರಭಾರಿ ರಾಜೇಶ್‌ ಕಾವೇರಿ ಮಹಂಕಾಳಿ ದೇವಳದ ಜಯಾನಂದ ಖಾರ್ವಿ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್‌ ರಾಯಪ್ಪನ ಮಠ ಬಿಲ್ಲವ ಸೇವಾ ಸಂಘದ ಕೆಳಮನೆ ರಮೇಶ್‌ ಪೂಜಾರಿ ಕಿಶೋರ್‌ ರಾವ್‌ ಕೃಷ್ಣ ನಾಯ್ಕ್‌ (ಕಿಟ್ಟಣ್ಣ)  ಹಾಗೂ ದೇವಳದ ಅರ್ಚಕರಾದ ಸತ್ಯ ನಾರಾಯಣ ಅಡಿಗರವರು ಉಪಸ್ಥಿತರಿದ್ದರು

   

Related Articles

error: Content is protected !!