ಕೋಟ : ಮಹಾತ್ಮಾ ಗಾಂಧಿಜೀ ಉಲ್ಲೇಖಿಸಿದಂತೆ ಜಗತ್ತಿನ ಆಧುನಿಕ ಬ್ರಹ್ಮ ಎಂಬ ಹೆಗ್ಗಳಿಕೆಗೆ ಬ್ರಹ್ಮಶ್ರೀ ನಾರಾಯಣಗುರುಗಳು ಗುರುತಿಸಿಕೊಂಡಿದ್ದರು.ಸಮಾಜದಲ್ಲಿ ಬದಲಾವಣೆ ಮಾಡುದಕ್ಕೆ ಅಸ್ಪೃಶ್ಯತೆ ಹಾಕಿ ಮೇಲು ಕೀಳು ತೊಡೆದು,ಸಮಾಜದಲ್ಲಿ ಮಹಿಳೆಯರು ಸಮಾನರಾಗಿ ಬದುಕುವುದಕ್ಕೆ ಶ್ರೀ ಗುರುಗಳ ಹೋರಾಟ ಅವಿಸ್ಮರಣೀಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಮತ ವ್ಯಕ್ತಪಡಿಸಿದರು.ಭಾನುವಾರ ಪಾಂಡೇಶ್ವರ ಮೂಡಹಡು ಮೂಡ್ಕಟ್ಟು ಶೇಖರ್ ಪೂಜಾರಿ ಮನೆಯಂಗಳದಿ ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಸಾಸ್ತಾನ ಇದರ ಆಶ್ರಯದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣಗುರುಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ನಾರಾಯಣ ಗುರುಗಳ ಅಭಿಲಾಷೆಯಂತೆ ಪ್ರತಿಯೊಬ್ಬರು ಶಿಕ್ಷಣ ಪಡೆದು ಈ ಸಮಾಜದಲ್ಲಿ ಮುಂಚೂಣಿಗೆ ನಿಲ್ಲಬೇಕೆಂಬ ಅವರ ಆಶಯವನ್ನು ನಾವೆಲ್ಲರೂ ಒಂದಾಗಿ ಒಟ್ಟಾಗಿ ಶ್ರಮಿಸೋಣ ಆ ಮೂಲಕ ಅವರ ಪ್ರತಿ ವಿಚಾರಧಾರೆಗಳು ಜಗತ್ತನ್ನು ಸ್ಪರ್ಶಿಸಲಿ ಎಂದು ಆಶಿಸಿದರು.ಇದೇ ವೇಳೆ ನೂತನವಾಗಿ ಆಯ್ಕೆಯಾದ ಸಂಸದರನ್ನು ಸಂಸ್ಥೆಯ ವತಿಯಿಂದ ಸಮಾಜದ ಹಿರಿಯರಾದ ಶಿವ ಪೂಜಾರಿಯವರು ಸನ್ಮಾನಿಸಿದರು.ಸಮಯದಾಯದ ಮುಖಂಡ ಚಂದ್ರಮೋಹನ್ ಪೂಜಾರಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಗುರುಪೂಜೆ ನೆರವೆರಿಸಿದರು.ಬಾಲಾಜಿ ಭಜನಾ ಮಂಡಳಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮಗಳು ಜರಗಿದವು.
ಇದೇ ಸಂದರ್ಭದಲ್ಲಿ ವಿಶಿಷ್ಟವಾಗಿ ಆಚರಿಸುವ ಗುರುಪೂಜಾ ಕಾರ್ಯಕ್ರಮದ ಮುಂದಿನ ವರ್ಷದ ಪೂಜೆ ಕಾರ್ಯಕ್ರಮ ಬಗ್ಗೆ ಊರಿನ ಗುರಿಕಾರ ಗಣೇಶ ಪೂಜಾರಿ ಮತ್ತು ಸಂಸದ ಕೋಟ ಸಹಿತ ವೀಳ್ಯವನ್ನು ಮಠತೋಟ ಗೋಪಾಲ ಪೂಜಾರಿಯವರಿಗೆ ಹಸ್ತಾಂತರ ಮಾಡಿದರು.ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಖಜಾಂಜಿ ವಿಜಯ್ ಪೂಜಾರಿ ಐರೋಡಿ, ಮೂಡಹಡು ಗ್ರಾಮ ಸಮಿತಿ ಅಧ್ಯಕ್ಷ ರಾಜು ಪೂಜಾರಿ,ಗ್ರಾಮ ಪಂಚಾಯತ್ ಸದಸ್ಯರಾದ ರವೀಶ್ ಶ್ರೀಯಾನ್, ಸುಜಾತಾ ವೆಂಕಟೇಶ್ ಪೂಜಾರಿ, ಗಣೇಶೋತ್ಸವ ಸಮಿತಿ ಮೂಡಹಡು ಇದರ ಅಧ್ಯಕ್ಷ ವಿಜಯ್ ಆಚಾರ್, ಕಳಿ ಬೈಲ್ ಕ್ಷೇತ್ರದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ, ಬಾಯರ್ ಹೋಮ್ ಪ್ರಾಡಕ್ಟ್ ಮಾಲಕರಾದ ನಾಗರತ್ನ ಬಾಯರಿ, ಹಾಗೂ ಕೋಟ ಗುರು ಮಂದಿರದ ಅರ್ಚಕ ಮೋಹನ್ ಪೂಜಾರಿ, ಮೂಡ್ಕಟ್ಟು ಕುಟುಂಬದ ಸಹೋದರರಾದ ಶೇಖರ್ ಪೂಜಾರಿ ಮೂಡಕಟ್ಟು, ವಿಜಯ್ ಪೂಜಾರಿ , ಗೋವಿಂದ ಪೂಜಾರಿ ,ರಾಘವೇಂದ್ರ ಪೂಜಾರಿ ಉಪಸ್ಥಿತರಿದ್ದರು.ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ , ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮವನ್ನು ಗ್ರಾಮಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ನಿರೂಪಿಸಿ ವಂದಿಸಿದರು.ಪಾಂಡೇಶ್ವರ ಮೂಡಹಡು ಮೂಡ್ಕಟ್ಟು ಶೇಖರ್ ಪೂಜಾರಿ ಮನೆಯಂಗಳದಿ ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಸಾಸ್ತಾನ ಇದರ ಆಶ್ರಯದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣಗುರುಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಸಂಸದರನ್ನು ಸಂಸ್ಥೆಯ ವತಿಯಿಂದ ಸಮಾಜದ ಹಿರಿಯರಾದ ಶಿವ ಪೂಜಾರಿಯವರು ಸನ್ಮಾನಿಸಿದರು. ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ, ಶ್ರೀ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಖಜಾಂಜಿ ವಿಜಯ್ ಪೂಜಾರಿ ಐರೋಡಿ ಮತ್ತಿತರರು ಇದ್ದರು.