ಕೋಟ : ಶರನ್ನವರಾತ್ರಿ ಉತ್ಸವದ ಮೂಲಕ ಧಾರ್ಮಿಕತೆಯ ಕೇಂದ್ರವಾಗಿಸಿಕೊಂಡು ಪ್ರಕೃತಿಯನ್ನು ಆರಾಧಿಸುವ ಕಾರ್ಯ ಉತ್ಸವವಾಗಿದೆ ಎಂದು ಪಾಂಡೇಶ್ವರದ ಯೋಗಗುರುಕುಲದ ಮುಖ್ಯಸ್ಥ ಡಾ.ವಿದ್ವಾನ್ ವಿಜಯ್ ಮಂಜರ್ ನುಡಿದರು.
ಶುಕ್ರವಾರ ಪಾಂಡೇಶ್ವರ ಶಾಲಾ ವಠಾರದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ 31ನೇ ಶಾರದೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಶಾರದೋತ್ಸವ ಧಾರ್ಮಿಕ ಕಾರ್ಯದ ಜತೆಗೆ ಸಾಂಸ್ಕೃತಿಕ ಮೆರುಗು ಹೆಚ್ಚಿಸಿ ಜ್ಞಾನದ ಸಂಪತ್ತು ವೃದ್ಧಿಸುತ್ತಿದೆ,ಉತ್ಸವಗಳು ಬರೆ ಹಬ್ಬವಾಗಿರದೆ ಸಮರ್ಪಣಾ ಮನೋಭಾವ ಹೊಸ ಹಿಸ ಚಿಂತನೆಗಳಿಗೆ ವೇದಿಕೆ ಕಲ್ಪಿಸಿದೆ.
ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಿ ಮಾದರಿಯಾಗಬೇಕು ಎಂದು ಕರೆಕೊಟ್ಟರು.ಸಾಸ್ತಾನದ ಸಂತ ಅಂತೋನಿ ಚರ್ಚನ ಫಾದರ್ ಸುನೀಲ್ ಡಿಸಿಲ್ವಾ ಶಾರದೋತ್ಸವದ ಮಹತ್ವದ ಬಗ್ಗೆ ಸವಿಸ್ತರವಾಗಿ ತಿಳಿಸಿದರು
ಇದೇ ವೇಳೆ ಧಾರ್ಮಿಕ ಕ್ಷೇತ್ರ ಹಿರಿಯರಾದ ಸಾಸ್ತಾನ ಗೋಳಿಗರಡಿ ದೈವಸ್ಥಾನದ ಮುಖ್ಯಸ್ಥ ಜಿ.ವಿಠ್ಠಲ್ ಪೂಜಾರಿ ಪಾಂಡೇಶ್ವರ,ಸಮಾಜ ಸೇವಕ ಪತ್ರಿಕಾ ವಿತರಕ ಚಂದ್ರಶೇಖರ್ ಮಯ್ಯ,ಇತ್ತೀಚಿಗೆ ನಿಧರಾದ ರಂಗಕರ್ಮಿ ಸಂಜೀವ ಕದ್ರಕಟ್ಟು ಇವರ ಪತ್ನಿ ಸೀತಾ ಪೂಜಾರಿ ಇವರುಗಳಿಗೆ ವಿಶೇಷ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾರದೋತ್ಸವ ಹಿನ್ನಲ್ಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ವಹಿಸಿದ್ದರು.
ಮಖ್ಯ ಅಭ್ಯಾಗತರಾಗಿ ಪಾಂಡೇಶ್ವರ ಗ್ರಾ.ಪಂ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ,ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ ಭಟ್,ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಉಪಸ್ಥಿತರಿದ್ದರು.
ಸಮಿತಿಯ ರಾಘವೇಂದ್ರರಾಜ್ ಸ್ವಾಗತಿಸಿ ಸನ್ಮಾನಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು. ನಂತರ ರಘು ಪಾಂಡೇಶ್ವರ ನೇತೃತ್ವದಲ್ಲಿ ಸಾಧನಾ ಕಲಾ ತಂಡದ ಕಲಾವಿದರಿಂದ ಕಿತಾಪತಿ ಕಿಟ್ಟ ನಾಟಕ ಪ್ರದರ್ಶನಗೊಂಡಿತು.