ಉಡುಪಿ : ತಮ್ಮ ಮಾತೃಭಾಷೆ ಬೇರೆ ಆದರೂ ಬಹಳ ಶ್ರದ್ಧೆಯಿಂದ ಕನ್ನಡ ಭಾಷೆಯನ್ನು ಮಾತಾಡಲು ಕಲಿತದ್ದು ಮಾತ್ರವಲ್ಲ ಬರೆಯಲೂ ಸಹಿತ ಪ್ರಾರಂಭ ಮಾಡಿದ ಏಕೈಕ ನಟಿ ಮುಂಗಾರು ಮಳೆ ಖ್ಯಾತಿಯ ಶ್ರೀಮತಿ ಪೂಜಾಗಾಂಧಿ ಅವರು ಕುಟುಂಬದೊಂದಿಗೆ ಇಂದು ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ದರ್ಶನ ಪಡೆದು ಭೋಜನಪ್ರಸಾದ ಸ್ವೀಕರಿಸಿ ಪರ್ಯಾಯ ಶ್ರೀ ಪಾದರಿಂದ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದರು