Home » ಗೀತಾಜಯಂತಿ ಉತ್ಸವ
 

ಗೀತಾಜಯಂತಿ ಉತ್ಸವ

by Kundapur Xpress
Spread the love

ಉಡುಪಿ : ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಶುಭ ಆಶೀರ್ವಾದದೊಂದಿಗೆ, ಉಡುಪಿಯ ಗೀತಾಮಂದಿರದಲ್ಲಿ ಗೀತಾಜಯಂತಿ ಉತ್ಸವ ನಡೆಯಿತು. ವಿದ್ವಾನ್ ಶತಾವಧಾನಿ Dr. ರಾಮನಾಥ ಆಚಾರ್ಯರು ದೀಪ ಬೆಳಗಿಸಿ ಶ್ರೀ ಕೃಷ್ಣನ ಗೀತೆಯ ಸಾರದ ಬಗ್ಗೆ ತಿಳಿಸಿ, ಎಲ್ಲರೂ ಜೀವನದಲ್ಲಿ ಗೀತೆಯನ್ನು ಬಳಸಿ ಉತ್ತಮ ಜೀವನವನ್ನು ಅನುಭವಿಸಿ ಎಂದು ಸಂದೇಶ ನೀಡಿದರು.

ಉಪಸ್ಥಿತರಿದ್ದ ಇನ್ನೋರ್ವ ಹಿರಿಯ ವಿದ್ವಾಂಸರಾದ ಶ್ರೀ ಮಧ್ವರಮಣ ಆಚಾರ್ಯರು ಪೋಷಕರು ಈಗಲೇ ಮಕ್ಕಳಲ್ಲಿ ಗೀತಾಭ್ಯಾಸವನ್ನು ಮಾಡಿಸಿ, ಹಿಂದೂ ಸಂಸ್ಕೃತಿಯನ್ನು ಉಳಿಸುವಂತಾಗಲಿ. ಎಂದು ಹರಸಿದರು. ಹಾಗು ಉಡುಪಿಯ ಸುಮಾರು 24 ಶಾಲೆಗಳ 800 ವಿದ್ಯಾರ್ಥಿಗಳಿಂದ ಗೀತಾ ಕಂಠ ಸ್ಪರ್ಧೆ ನಡೆಸಿ, 175 ವಿಜೇತರಿಗೆ . ಪ್ರಮಾಣಪತ್ರ ದೊಂದಿಗೆ ಬಹುಮಾನ ನೀಡಿದರು. ಗೀತಾ ಮಾತೆಯರಿಂದ ಗೀತಾ ಪಾರಾಯಣ ನಡೆದಿದ್ದು , ಕಾರ್ಯಕ್ರಮವನ್ನು ಶ್ರೀ ರಮೇಶ್ ಭಟ್ ಕೆ ನಿರೂಪಿಸಿ ಸಂಯೋಜಿಸಿದ್ದರು. ಶ್ರೀಮಠದ ಶ್ರೀ ವಿಷ್ಣುಮೂರ್ತಿ ಉಪಾಧ್ಯ ಸ್ವಾಗತಿಸಿದರು.ಶ್ರೀ ರವೀಂದ್ರ ಆಚಾರ್ಯರು ಧನ್ಯವಾದವಿತ್ತರು

   

Related Articles

error: Content is protected !!