ಉಡುಪಿ : ಭಾವಿ ಪರ್ಯಾಯ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಶ್ರೀ ಸುಶ್ರೀ೦ದ್ರ ತೀರ್ಥ ಶ್ರೀಪಾದರ ಜೊತೆಗೆ ಭಕ್ತಜನರ ಅಪೇಕ್ಷೆ ಮೇರೆಗೆ ಬೆಂಗಳೂರು ನಗರದ ಗೋವರ್ಧನ ಕ್ಷೇತ್ರ ,ಶ್ರೀ ಪುತ್ತಿಗೆ ಮಠದಲ್ಲಿ ಚಾತುರ್ಮಾಸ್ಯವ್ರತವನ್ನು ಈ ಬಾರಿ ನಡೆಸಲಿದ್ದು ಈ ಬಗ್ಗೆ ನಡೆಯಲಿರುವ ವಿಶೇಷ ಸಿದ್ಧತೆಗಳ ಬಗ್ಗೆ ಎರಡನೆಯ ಸಮಾಲೋಚನಾ ಸಭೆ ಶ್ರೀ ಗೋವರ್ಧನ ಕ್ಷೇತ್ರ ಶ್ರೀ ಪುತ್ತಿಗೆ ಮಠ ದಲ್ಲಿ ನಡೆಯಿತು. ಸಭೆಯಲ್ಲಿ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದು ತಮ್ಮ ಸಲಹೆ ,ಸಹಕಾರ ವನ್ನು ನೀಡಿದರು