437
ಕುಂದಾಪುರ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ತನ್ನ ಶಿಷ್ಯ ವೃಂದದವರೊಂದಿಗೆ ಭೇಟಿ ನೀಡಿದರು

ದೇವಸ್ಥಾನದ ಆಡಳಿತ ಧರ್ಮಧರ್ಶಿಗಳಾದ ಶ್ರೀ ರಮಣ ಉಪಾಧ್ಯಾಯ ಹಿರಿಯ ಧರ್ಮಧರ್ಶಿಗಳಾದ ಶ್ರೀ ಕೆ ಸೂರ್ಯನಾರಾಯಣ ಉಪಾಧ್ಯಾಯ ಹಾಗೂ ಧರ್ಮಧರ್ಶಿಗಳಾದ ವಿಠಲ ಉಪಾಧ್ಯಾಯ ರವರು ದೇವಸ್ಥಾನದ ವತಿಯಿಂದ ಶ್ರೀಪಾದರನ್ನು ಸ್ವಾಗತಿಸಿದರು

ತಮ್ಮ ಪರ್ಯಾಯ ಪೂರ್ವಸಂಚಾರವನ್ನುಆರಂಭಿಸುವ ಮುನ್ನ ಭಾವಿ ಪರ್ಯಾಯ ಪೀಠಸ್ತರಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತನ್ನ ಶಿಷ್ಯ ಶ್ರೀ ಸುಶೀಂದ್ರ ತೀರ್ಥರೊಂದಿಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಿ ಮುಂದಿನ ಪರ್ಯಾಯವು ನಿರ್ವಿಘ್ನವಾಗಿ ನಡೆಯುವಂತೆ ಪ್ರಾರ್ಥಿಸಿ ಶ್ರೀ ವಿನಾಯಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು

ಈ ಸಂದರ್ಭದಲ್ಲಿ ದೇವಳದ ಧರ್ಮಧರ್ಶಿಗಳು ಪರ್ಯಾಯ ಅರ್ಚಕರು ಹಾಗೂ ಮೆನೇಜರ್ ಮತ್ತು ಅರ್ಚಕ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

