ಉಡುಪಿ : ರಾಮ ನವಮಿಯನ್ನು ತಾವಿದ್ದ ಸ್ಥಳದಲ್ಲೇ ವಿಜೃಂಭಣೆಯಿಂದ ಆಚರಿಸಿ ಎಂದು ಪೇಜಾವರ ಮಠ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿ ಮಂದಿರ ಉದ್ಘಾಟನೆ ಜೊತೆಗೆ ಬಾಲರಾಮನ ಪ್ರತಿಷ್ಠಾಪನೆ ಕೂಡ ನಡೆಯಿತು. ವಿಜೃಂಭಣೆಯಿಂದ ಸಾಂಗವಾಗಿ ಕಾರ್ಯಕ್ರಮ ನಡೆಯಿತು. ಭಕ್ತರ ಪ್ರವಾಹ ನಿರಂತರವಾಗಿ ಹರಿದು ಬರುತ್ತಿದೆ. ಈಗ ರಾಮ ನವಮಿ ಸಮೀಪಿಸುತ್ತಿದೆ. ಪ್ರತಿನಿತ್ಯ ಗಂಟೆಗೆ ಸುಮಾರು 15 ಸಹಸ್ರ ಮಂದಿಗೆ ಮಾತ್ರ ದರ್ಶನಕ್ಕೆ ಅವಕಾಶ ಸಿಗುತ್ತಿದೆ. ರಾಮ ನವಮಿ ಎಂಬ ಕಾರಣಕ್ಕೆ ಹೆಚ್ಚಿನ ಜನರು ಬರುವ ಆಶಾ ಭಾವನೆ ಹೊಂದಿದ್ದು, ಹೆಚ್ಚಿನ ಜನರು ರಾಮನವಮಿ ಸುಸಂದರ್ಭದಲ್ಲಿ ತಮ್ಮ ತಮ್ಮ ದೇವಾಲಯದಲ್ಲೇ, ಮನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿಜೃಂಭಣೆಯಿಂದ ರಾಮನವಮಿ ಆಚರಿಸಿ ಎಂದರು.