Home » ರಾಣುಮಕ್ಕಿ ನಾಗಬನ : ಸಂಪನ್ನಗೊಂಡ 26ನೇ ವರ್ಧಂತಿ
 

ರಾಣುಮಕ್ಕಿ ನಾಗಬನ : ಸಂಪನ್ನಗೊಂಡ 26ನೇ ವರ್ಧಂತಿ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕಮ್ಮನಸಾಲು  ರಸ್ತೆಯಲ್ಲಿರುವ ರಾಣುಮಕ್ಕಿ ರೆಕಾರ್ಡ್ ಶ್ರೀ ನಾಗಬೊಬ್ಬರ್ಯ ಬನದ 26ನೇ ಪ್ರತಿಷ್ಠಾಪನ  ವರ್ಧಂತಿ ಸಂಪನ್ನಗೊಂಡಿತು

ದೇಗುಲದ ಅರ್ಚಕರಾದ ನಾರಾಯಣ ಹೊಳ್ಳರವರ ನೇತೃತ್ವದಲ್ಲಿ  ಶ್ರೀ ನಾಗ ದೇವರ ವರ್ಧಂತ್ಯೋತ್ಸವದ ಪ್ರಯುಕ್ತ  ಶ್ರೀ ನಾಗದೇವರಿಗೆ ಫಲ ಸಮರ್ಪಣೆ ಗುರು ಪ್ರಾರ್ಥನೆ ಗಣಪತಿ ಪೂಜೆ ಸ್ವಸ್ತಿ ಪುಣ್ಯಾಹವಾಚನ ಪ್ರಧಾನ ಹೋಮ ಕಳಶ ಸ್ಥಾಪನೆ ನಾಗದೇವರಿಗೆ ಕಳಶಾಭಿಷೇಕ ಮಹಾಪೂಜೆ ನಡೆಯಿತು 

26ನೇ ಪ್ರತಿಷ್ಠಾಪನ ವರ್ಧಂತಿ ಸಮಿತಿಯ ಅಧ್ಯಕ್ಷರಾದ ಕೆ ಆರ್‌ ಉಮೇಶ್‌ ರಾವ್‌ ದಂಪತಿಗಳು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದರು

ಬೆಳಿಗ್ಗೆ 10.30ರಿಂದ  ಶ್ರೀರಾಮ ಮಾತೃ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12:30 ಕ್ಕೆ ಮಹಾ ಅನ್ನ ಸಂತರ್ಪಣೆ ಜರುಗಿದ್ದು 2,500 ಮಿಕ್ಕಿ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು 

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಕೆ ಆರ್‌ ಕಾಶೀನಾಥ್‌ ಕಾರ್ಯದರ್ಶಿ ವಿಷ್ಣು ಹಾಗೂ ಸಮಿತಿಯ ಮಧುಕರ್‌ .ಕೆ ನಾಗರಾಜ್‌ ನಾಯ್ಕ್‌ ಕೆ ಪಿ ಸುಧೀರ್‌ ಮುಂತಾದವರು ಉಪಸ್ಥಿತರಿದ್ದರು 

 

Related Articles

error: Content is protected !!