Home » ಬಗಳಾಂಬ ದೇವಸ್ಥಾನಕ್ಕೆ ರವಿ ಬಸ್ರೂರು ಭೇಟಿ
 

ಬಗಳಾಂಬ ದೇವಸ್ಥಾನಕ್ಕೆ ರವಿ ಬಸ್ರೂರು ಭೇಟಿ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಚಿಕ್ಕನ್‌ಸಾಲ್‌ ರಸ್ತೆಯಲ್ಲಿ ಶರನ್ನವರಾತ್ರಿ ಉತ್ಸವವನ್ನು ಆಚರಿಸುತ್ತಿರುವ ಬಗಳಾಂಬ ತಾಯಿ ದೇವಸ್ಥಾನಕ್ಕೆ ಖ್ಯಾತ ಸಂಗೀತ ನಿರ್ಧೇಶಕ ರವಿ ಬಸ್ರೂರು ರವರು ತನ್ನ ಸಹೋದರ ರಾಮಕೃಷ್ಣ ರವರೊಂದಿಗೆ ಭೇಟಿ ನೀಡಿ ಬಗಳಾಂಬ ತಾಯಿಯ ದರ್ಶನ ಪಡೆದರು

ಬಗಳಾಂಬ ತಾಯಿ ದೇವಸ್ಥಾನದ ಮೊಕ್ತೇಸರರಾದ ಗಣಪತಿ ಸುವರ್ಣ ಹಾಗೂ ಜಲಜ ರವರು ರವಿ ಬಸ್ರೂರು ರವರನ್ನು ಆದರದಿಂದ ಬರಮಾಡಿಕೊಂಡು ಬಗಳಾಂಬ ದೇವಿಯ ಪ್ರಸಾದ ನೀಡಿ ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಿದರು

ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಸೀತರಾಮ ಹೇರಿಕುದ್ರು ಅಧ್ಯಕ್ಷರಾದ ಕೆ ಬಿ ಪ್ರಕಾಶ್‌ ಚಂದ್ರಶೇಖರ್‌ ಉದಯ್ ಕುಮಾರ್‌ ಶ್ರೀಧರ್‌ ಮುಂತಾದವರು ಉಪಸ್ಥಿತರಿದ್ದರು   

 

Related Articles

error: Content is protected !!