ಕೋಟ : ಇದೇ ನವಂಬರ್ 30ರಂದು ನಡೆಯಲಿರುವ ವಾರ್ಷಿಕ ದೀಪೋತ್ಸವದ ಅಂಗವಾಗಿ ಬೆಳಿಗ್ಗೆ 5:೦೦ ಗಂಟೆಗೆ ರುದ್ರಾಭಿಷೇಕ ಮಹಾಮಂಗಳಾರತಿ ಹಾಗೂ ಶ್ರೀ ಗುರು ನರಸಿಂಹ ದೇವರ ಭವ್ಯ ದರ್ಶನ 6.00ರಿಂದ ಅಧಿವಾಸ ಹೋಮ ಕಲಶಾಭಿಷೇಕ ವೇದಪಾರಾಯಣ ಸಂಹಿತಾಭಿಷೇಕ ಮಹಾಪೂಜೆ ಸಂಜೆ4.30 ರಿಂದ ಶ್ರೀದೇವಳದ ವಠಾರದಲ್ಲಿ ಸಭಾ ಕಾರ್ಯಕ್ರಮ ಮತ್ತು ಸಾಧಕರಾದ ಕೆ. ತಾರಾನಾಥ ಹೊಳ್ಳ, ಪಿ. ವಿ. ಆನಂದ, ಸುಜಯಿಂದ್ರ ಹಂದೆ, ಶ್ರೀಧರ್ ಉಳಿತ್ತಾಯ, ಜನಾರ್ಧನ ಹೊಳ್ಳ, ಚಿತ್ತೂರು ಪ್ರಭಾಕರ ಆಚಾರ್ಯ, ನರೇಂದ್ರ ಕುಮಾರ ಕೋಟ, ಸತೀಶಚಂದ್ರ ಶೆಟ್ಟಿ, ವೇ. ಮೂ. ವಿಜಯಕುಮಾರ ಅಡಿಗ,ಸಮೃದ್ಧಿ ಎಸ್ ಮೊಗವೀರ ,ಅಂತರಾಷ್ಟ್ರೀಯ ಈಜು ಸ್ಪರ್ಧೆಗೆ ಆಯ್ಕೆಯಾಗಿರುವ ಕೋಡಿ ಕನ್ಯಾನದ ಗೋಪಾಲ ಖಾರ್ವಿಯವರಿಗೆ ಶಾಸಕ ಕಿರಣ ಕುಮಾರ ಕೊಡ್ಗಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಮತ್ತು ಕೂಟಮಹಾಜಗತ್ತು ಕೇಂದ್ರ ಸಂಸ್ಥೆಯ ಕಾರ್ಯದರ್ಶಿ ಸುರೇಶ ತುಂಗರ ಉಪಸ್ಥಿತಿಯ ಸನ್ಮಾನ ಕಾರ್ಯಕ್ರಮ ಜರಗಲಿದೆ. ರಂಗಮಂದಿರದಲ್ಲಿ ಸಂಜೆ 6.30ರಿಂದ ಯಕ್ಷಾಂತರಂಗ ವ್ಯವಸಾಯೀ ಯಕ್ಷ ತಂಡ ಕೋಟ ಇವರಿಂದ ಯಕ್ಷಗಾನ ಪ್ರದರ್ಶನ ಗಯ ಚರಿತ್ರೆ ಸಂಜೆ 7-೦೦ರಿಂದ ದೀಪೋತ್ಸವ ಹಿರೇರಂಗಪೂಜೆ, ಉತ್ಸವಬಲಿ, ಪುಷ್ಪರಥೋತ್ಸವ, ತೆಪ್ಪೋತ್ಸವ ನಡೆಯಲಿದೆಯಂದು ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ