Home » ಕೂಡ್ಲಿ ಶಾರದಾಂಬ ದೇವಸ್ಥಾನ
 

ಕೂಡ್ಲಿ ಶಾರದಾಂಬ ದೇವಸ್ಥಾನ

by Kundapur Xpress
Spread the love

ಶಾರದೆಯನ್ನು ವಿದ್ಯೆಗೆ ಅಧಿಪತಿಯೆಂದು ಹೇಳಲಾಗುತ್ತದೆ ವಿದ್ಯೆಯು ವಿನಯವನ್ನು ಕಲಿಸುತ್ತದೆ ಎಂದು ಪುರಾಣಗಳು ಹೇಳುತ್ತವೆ. ಪ್ರತಿಯೊಂದು ವಿದ್ಯೆಗೂ ಕೂಡ ಸರಸ್ವತಿ ಅಧಿಪತಿ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ ಚಿಕ್ಕ ಮಕ್ಕಳನ್ನು ಯಾವುದೇ ವಿದ್ಯೆಯನ್ನು ಕಲಿಯುವ ಮೊದಲು ಸರಸ್ವತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಥಮ ಅಕ್ಷರವನ್ನು ಸರಸ್ವತಿ ದೇವಾಲಯದಲ್ಲಿ ಬರಿಸುವುದು ಎಲ್ಲರ ಪಾಲಿನ ಆಚರಣೆ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಇನ್ನೊಂದು ಸರಸ್ವತಿ ದೇವಾಲಯದ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಕೂಡ್ಲಿ ಶಾರದಾಂಬ ದೇವಾಲಯ ಇರುವುದು ಶಿವಮೊಗ್ಗ ಜಿಲ್ಲೆಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಕ್ಷೇತ್ರದಲ್ಲಿ ಈ ಕ್ಷೇತ್ರಕ್ಕೆ ಕೂಡ್ಲಿ ಎಂಬ ಹೆಸರು ಬರಲು ಕಾರಣ ತುಂಗಾ ಮತ್ತು ಭದ್ರಾ ನದಿಗಳ ಸಂಗಮದ ಸ್ಥಳ ಎಂದು ಇಲ್ಲಿ ಶಾರದಾಂಬ ದೇವಿಯ ವಿಗ್ರಹವು ಇದೆ

ಶಾರದಾಂಬ ದೇವಿಯ ನಿಂತ ಭಂಗಿಯಲ್ಲಿ ಇರುವಂತಹ ವಿಗ್ರಹ ಇಡೀ ಭಾರತದಲ್ಲಿ ಇದೇ ಮೊದಲ ವಿಗ್ರಹ ಎಂದು ಹೇಳಲಾಗುತ್ತದೆ ಕೂಡ್ಲಿ ಇದು ಅನೇಕ ಸಂತರು ತಪಸ್ಸು ಮಾಡಿದಂತಹ ಕ್ಷೇತ್ರ ಎಂದು ಕೂಡ ಹೇಳಲಾಗುತ್ತದೆ ಇಲ್ಲಿನ ಸ್ಥಳ ಪುರಾಣದ ಪ್ರಕಾರ ಈ ಜಗದ್ಗುರು ಶಂಕರಾಚಾರ್ಯರು ತನಗೆ ಸಾಕ್ಷಾತ್ಕಾರವಾದಂತ ಶಾರದಾಂಬೆಯನ್ನು ಕಾಶ್ಮೀರದಿಂದ ದಕ್ಷಿಣ ಭಾರತಕ್ಕೆ ಬರಬೇಕೆಂದು ಕೇಳಿಕೊಂಡಾಗ ಶಾರದಾಂಬೆಯು ಬಂದು ನೆಲೆ ನಿಂತ ಮೊದಲ ಕ್ಷೇತ್ರ ಎಂದು ಹೇಳಲಾಗುತ್ತದೆ. ಆದಿ ಗುರು ಶಂಕರರು ಸರಸ್ವತಿಯನ್ನು ಕಾಶ್ಮೀರದಿಂದ ದಕ್ಷಿಣ ಭಾರತಕ್ಕೆ ಬರಬೇಕೆಂದು ಬೇಡಿಕೊಂಡಾಗ ಆಕೆ ಒಂದು ಶರತ್ತು ವಿಧಿಸಿ ತಾನು ದಕ್ಷಿಣ ಭಾರತಕ್ಕೆ ಬರುವೆನೆಂದು ಹೇಳುತ್ತಾಳೆ ಆಕೆಯ ಶರತ್ತಿನ ಪ್ರಕಾರ ಆಕೆ ತೇಜಸ್ಸಿನ ರೂಪದಲ್ಲಿ ಶಂಕರಾಚಾರ್ಯರನ್ನು ಹಿಂಬಾಲಿಸುತ್ತಾಳೆ ಯಾವ ಕ್ಷೇತ್ರದಲ್ಲಿ ಶಂಕರಾಚಾರ್ಯರು ಹಿಂದೆ ತಿರುಗಿ ನೋಡುವರು ಅದೇ ಕ್ಷೇತ್ರದಲ್ಲಿ ತಾನು ಮೊದಲು ನೆಲೆ ನಿಲ್ಲುತ್ತೇನೆಂದು ಹೇಳುತ್ತಾಳೆ ಶಂಕರಾಚಾರ್ಯರು ಕೂಡ್ಲಿಗಿ ಬಂದಾಗಒಂದು ಬಾರಿ ಹಿಂದೆ ತಿರುಗಿ ನೋಡಿದಾಗ ಸರಸ್ವತಿ ದೇವಿ ಮೊದಲು ನೆಲೆ ನಿಂತ ಕ್ಷೇತ್ರವೇ ಕೂಡ್ಲಿ ಶಾರದಾಂಬೆ ಕ್ಷೇತ್ರ

   

Related Articles

error: Content is protected !!