Home » ಪಾಂಡೇಶ್ವರ ಶ್ರೀ ಕ್ಷೇತ್ರ ಕಳಿಬೈಲ್ ನವರಾತ್ರಿ ಉತ್ಸವ
 

ಪಾಂಡೇಶ್ವರ ಶ್ರೀ ಕ್ಷೇತ್ರ ಕಳಿಬೈಲ್ ನವರಾತ್ರಿ ಉತ್ಸವ

by Kundapur Xpress
Spread the love

ಕೋಟ : ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಪಂಜುರ್ಲಿ, ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನ ಕೆಳಬೆಟ್ಟು, ಮೂಡಹಡು ಗ್ರಾಮ, ಸಾಸ್ತಾನ ಇಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಅ.3ರ ಗುರುವಾರದಿಂದ ಮೊದಲ್ಗೊಂಡು ಅ. 13 ಆದಿತ್ಯವಾರದ ಪರ್ಯಂತ ಶ್ರೀ ಕ್ಷೇತ್ರ ಕಳಿಬೈಲ್ ಸಾನಿಧ್ಯದಲ್ಲಿ ಅನಾದಿ ಕಾಲದಿಂದಲೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸ್ಥಳದ ಪ್ರಧಾನ ಶಕ್ತಿ ತುಳಸಿ ಅಮ್ಮ, ಕಾಲಾವಧಿ ಸೇವೆಯನ್ನು ಪಡೆಯುವ ಶಿರಸಿ ಮಾರಿಕಾಂಬೆ, ಕಾರಣಿಕ ದೈವ ಪಂಜುರ್ಲಿ, ಕಳಿಬೈಲ್ ಸ್ವಾಮಿ ಕೊರಗಜ್ಜ ಹಾಗೂ ಸಪರಿವಾರದೊಂದಿಗೆ ವಿಶೇಷವಾಗಿ ಶರನ್ನವರಾತ್ರಿ ಉತ್ಸವ ನಡೆಯಲಿದೆ

ಈ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಭಾಗವಾಗಿ ಅ.3ರಂದು 13ವರೆಗೆ ಪ್ರತಿದಿನ ಸಂಜೆ 6.00ರಿಂದ ಭಜನೆ, ಮಹಾಪೂಜೆ ಮತ್ತು ನವರಾತ್ರಿ ಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮ
ಅ.6 ರಂದು ಶ್ರೀ ವೇದಮೂರ್ತಿ ನಾಯಿರ್‍ಬೆಟ್ಟು ರಮೇಶ್ ಭಟ್ ಇವರ ನೇತೃತ್ವದಲ್ಲಿ ಸಾಮೂಹಿಕ ದಾರ್ಗಾಪೂಜೆ, ಬೆಳಿಗ್ಗೆ 9.00ಕ್ಕೆ ಪ್ರಸನ್ನ ಪೂಜೆ ಮಧ್ಯಾಹ್ನ 12.00ಕ್ಕೆಮಹಾಪೂಜೆ ,ಅಪರಾಹ್ನ ಅನ್ನಸಂತರ್ಪಣೆ ನಂತರ 2.00ಕ್ಕೆ ಶ್ರೀ ಪಂಜುರ್ಲಿ ಮತ್ತು ಶಿರಸಿ ಅಮ್ಮನವರವದರ್ಶನ ಸೇವೆ,3.ಗ ಸ್ವಾಮಿ ಕೊರಗಜ್ಜನ ದರ್ಶನ ಸೇವೆ ,ಸಂಜೆ 6.30ಕ್ಕೆ ಭಜನಾ ಕಾರ್ಯಕ್ರಮ,ಪ್ರತಿದಿನ ರಾತ್ರಿ 8.00ಕ್ಕೆ ಮಹಾಮಂಗಳಾರತಿ, ನವರಾತ್ರಿ ಪೂಜೆ ನಡೆಯಲಿದೆ ಎಂದು ಶ್ರೀ ದೇಗುಲ ಮುಕ್ತೇಸರ ಎಂ.ಸಿ ಚಂದ್ರಶೇಖರ್ ,ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   

Related Articles

error: Content is protected !!