ಕುಂದಾಪುರ : ನಗರದ ಚಿಕ್ಕಮ್ಮನಸಾಲು ರಸ್ತೆಯ ತುತ್ತ ತುದಿಯಲ್ಲಿರುವ ವಿಶಾಲವಾದ ಎತ್ತರದ ಆವರಣದಲ್ಲಿ ಗಂಗಾವಳಿ ನದಿಗೆ ಮುಖ ಮಾಡಿಕೊಂಡು ನೆಲೆ ನಿಂತಿರುವವಳೇ ಶ್ರೀ ಚಿಕ್ಕಮ್ಮ ದೇವಿ ಊರ ಪರ ಊರಿನಲ್ಲಿ ನೆಲೆಸಿರುವ ತನ್ನೆಲ್ಲಾ ಭಕ್ತರ ಅಭೀಷ್ಟೇಗಳನ್ನು ನೆರವೇರಸುತ್ತಾ ಭಕ್ತರ ಸಂಕಷ್ಠಗಳನ್ನು ಪರಿಹರಿಸುವ ತಾಯಿಯಾಗಿದ್ದಾಳೆ
ಚಿಕ್ಕಮ್ಮ ದೇವಿ ದೇವಸ್ಥಾನದ ಸಾಂಪ್ರದಾಯಿಕತೆಯ ಮೆರುಗನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ನವೀಕರಣದ ಸಂದರ್ಭದಲ್ಲಿ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯನ್ನು ಮೈಗೂಡಿಸಿಕೊಂಡು ಹೊಚ್ಚ ಹೊಸದಾಗಿ ಅಲಂಕರಿಸಲ್ಪಡುತ್ತಿರುವ ಚಿಕ್ಕಮ್ಮ ದೇವಸ್ಥಾನವು ಶತಮಾನಗಳಿಂದಲೂ ಎಲ್ಲಾ ವರ್ಗದ ಸಮಾಜ ಬಾಂಧವರ ನಂಬಿಕೆ, ನಡವಳಿಕೆ, ಶ್ರದ್ಧೆಯ ಶಕ್ತಿ ಕೇಂದ್ರವಾಗಿ ಖ್ಯಾತಿಯನ್ನು ಪಡೆದುಕೊಂಡು ಬಂದಿದೆ
ಸುಮಾರು ಆರು ಅಡಿ ಎತ್ತರದ ಚಿಕ್ಕಮ್ಮ ದೇವಿಯ ಆಕರ್ಷಕ ಮರದ ವಿಗ್ರಹವು ಭಕ್ತರಲ್ಲಿ, ಭಾವುಕರಲ್ಲಿ, ಆಸ್ತಿಕರಲ್ಲಿ ಭಯ – ಭಕ್ತಿಯನ್ನು ಹುಟ್ಟಿಸುತ್ತದೆ. ಚಿಕ್ಕಮ್ಮ ದೇವಿಯ ವಿಗ್ರಹವು ಈ ದೇವಸ್ಥಾನದ ಪ್ರಧಾನ ವಿಗ್ರಹವಾಗಿರುವುದರಿಂದ ಸಂಪ್ರದಾಯದಂತೆ ಅದಕ್ಕೆ ಅಗ್ರ ಪೂಜೆ ಸಲ್ಲುತ್ತದೆ. ಚಿಕ್ಕಮ್ಮ ದೇವಿ ದೇವಸ್ಥಾನದ ಗರ್ಭಗುಡಿಯೊಳಗೆ ಚಿಕ್ಕಮ್ಮನ ವಿಗ್ರಹವಲ್ಲದೇ ಪರಿವಾರ ದೈವಗಳ ಸುಂದರ ಕಾಷ್ಠ ವಿಗ್ರಹಗಳಿವೆ. ಅವು ಗೊರಮ್ಮ, ದೊಟ್ಟೆಕಾಲು ಚಿಕ್ಕು, ಮರ್ಲ ಚಿಕ್ಕು, ಮಾಸ್ತಿಯಮ್ಮ, ನಂದಿ, ಗೆಂಡದ ಹಾೈಗುಳಿ, ಬೊಬ್ಬರ್ಯ, ಮಲಸಾರಿ ಚಿಕ್ಕಮ್ಮ ಗರ್ಭಗುಡಿಯ ಹೆಬ್ಬಾಗಿಲು ಅತ್ಯಂತ ಆಕರ್ಷಕವಾಗಿದ್ದು ಇದರ ಕುಸುರಿ ಕೆತ್ತನೆ ನೋಡಲು ಬಹಳ ಸುಂದರವಾಗಿದೆ
ಕೆ.ಗಣೇಶ್ ಹೆಗ್ಡೆ ಕುಂದಾಪುರ