Home » ಶ್ರೀ ಚಕ್ರ ಪೀಠ ಸುರಪೂಜಿತೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ
 

ಶ್ರೀ ಚಕ್ರ ಪೀಠ ಸುರಪೂಜಿತೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

ಶರನ್ನವ ರಾತ್ರಿ ಸಂಭ್ರಮ

by Kundapur Xpress
Spread the love

ಉಡುಪಿ : ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವ ರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಧಾರ್ಮಿಕ ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳು, ಹಾಗೂ ನಿರಂತರ ಅನ್ನಸಂತರ್ಪಣೆಯೊಂದಿಗೆ ಬಹು ವಿಜೃಂಭಣೆಯಿಂದ ನೆರವೇರಲಿದೆ.ಧಾರ್ಮಿಕ ಕಾರ್ಯಕ್ರಮವಾಗಿ ದಿನಂಪ್ರತಿ ಭಕ್ತರ ಸೇವಾ ರೂಪದ ಜೋಡಿ ಚಂಡಿಕಾಯಾಗ, ಶ್ರೀ ದುರ್ಗಾ ನಮಸ್ಕಾರ ಪೂಜೆ, ಸಹಸ್ರನಾಮ ಅರ್ಚನೆ ರಂಗಪೂಜೆ, ದೀಪಾರಾಧನೆ ತುಲಾಭಾರ ಸೇವೆ ವಿದ್ಯಾರಂಭಗಳು ನೆರವೇರಲಿದೆ.ತಾರೀಕು 24ರಂದು ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಲಕ್ಷ್ಮಿ ಸಹಸ್ರನಾಮ ಮಹಾಯಾಗ ತಾರೀಕು 27ರ ಲಲಿತ ಪಂಚಮಿಯ ಪರ್ವಕಾಲದಲ್ಲಿ ಶ್ರೀ ಲಲಿತಾ ಸಹಸ್ರ ಕದಳಿ ಯಾಗ, ತಾರೀಕು ಎರಡರ ವಿಜಯ ದಶಮಿಯ ಪರ್ವಕಾಲದಲ್ಲಿ ಕ್ಷೇತ್ರದ ವತಿಯಿಂದ ಸಾಮೂಹಿಕವಾಗಿ ತ್ರಿಶಕ್ತಿ ಮಹಾಯಾಗಗಳು, ಸಂಜೆ ಬಲಿ ಉತ್ಸವ ಸಹಿತ ಆರಾಧನಾ ರಂಗ ಪೂಜಾ ಮಹೋತ್ಸವ, ಮಹಾ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ ಸಂಪನ್ನಗೊಳ್ಳಲಿದೆ.ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಗಾನ ನಾಟ್ಯ ನಾದ ಪ್ರಿಯರಾದ ಶ್ರೀ ದುರ್ಗಾ ಆದಿಶಕ್ತಿ ದೇವಿಯ ಅಭಿಮುಖವಾಗಿ ನಾಟ್ಯ ಸೇವೆಗಳು ಸಂಗೀತ ಸೇವೆಗಳು ನಾದ ಸೇವೆಗಳು ವಿವಿಧ ಕಲಾವಿದರಿಂದ ಸಮರ್ಪಿತ ವಾಗಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.

 

Related Articles

error: Content is protected !!