Home » ಭಗವದ್ಗೀತೆ ಹರಿಕತೆ ಸರಣಿಗೆ ಪುತ್ತಿಗೆಶ್ರೀ ಚಾಲನೆ
 

ಭಗವದ್ಗೀತೆ ಹರಿಕತೆ ಸರಣಿಗೆ ಪುತ್ತಿಗೆಶ್ರೀ ಚಾಲನೆ

by Kundapur Xpress
Spread the love

ಉಡುಪಿ : ಪರ್ಯಾಯ ಪುತ್ತಿಗೆ ಸುಗುಣೇಂದ್ರತೀರ್ಥರ ನೇತೃತ್ವದಲ್ಲಿ ಇಲ್ಲಿನ ಕೃಷ್ಣಮಠದಲ್ಲಿ 48 ದಿನಗಳ ಕಾಲ ನಡೆಯುವ ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ಭಗವದ್ಗೀತೆಗೆ ಸಂಬಂಧಿಸಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಹಂಡೆದಾಸ ಪ್ರತಿಷ್ಠಾನದ ಸಹಯೋಗದೊಂದಿಗೆ ರುಕ್ಕಿಣಿ ಹಂಡೆ ಸಹಕಾರದೊಂದಿಗೆ ನಡೆಯುವ 18 ದಿನಗಳವಧಿ ಯ ಭಗವದ್ಗೀತೆ ಹರಿಕಥೆ ಸರಣಿ ಕಾರ್ಯಕ್ರಮಕ್ಕೆ ಸೋಮವಾರ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಚಾಲನೆ ನೀಡಿದರು.

ನಶಿಸುತ್ತಿರುವ ಅಪೂರ್ವ ಕಲೆಯಾದ ಹರಿಕಥೆಯನ್ನು ಉಳಿಸುವಲ್ಲಿ ಹಂಡೆಯವರ ಪ್ರಯತ್ನ ಅನುಕರಣೀಯ, ಭಗವದ್ಗೀತೆಯ ಮೇಲಿನ ಹರಿಕಥೆಯ ಪ್ರಥಮ ಪ್ರಯೋಗ ವಿಶ್ವ ಪರ್ಯಾಯ ಅವಧಿಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಆ ಮೂಲಕವೂ ಗೀತೆಯ ಪ್ರಚಾರ ನಡೆಯುವಂತಾಗಲಿ ಎಂದು ಹಾರೈಸಿದರು

ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಸಗ್ರಿ ವೇದವ್ಯಾಸ ಐತಾಳ ವಂದಿಸಿದರು. ಮಧೂರು ಬಾಲಸುಬ್ರಹ್ಮಣ್ಯಂ, ಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ, ರಮೇಶ್ ಭಟ್, ರುಕ್ಕಿಣಿ ಹಂಡೆ, ಉಳ್ಳೂರು ಭಾಗ್ಯಲಕ್ಷ್ಮಿ ಮೊದಲಾದವರಿದ್ದರು. ಹರಿಕಥೆ ಡಿ. 12ರ ವರೆಗೆ ಸಂಜೆ 4.00 ರಿಂದ 6.00 ರ ವರೆಗೆ ಮಧ್ವ ಮಂಟಪದಲ್ಲಿ ನಡೆಯಲಿದೆ.

   

Related Articles

error: Content is protected !!