ಕುಂದಾಪುರ : ನಗರದ ಚಿಕ್ಕಮ್ಮನಸಾಲು ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದ ಪ್ರತಿಷ್ಠಾಪನ ಪ್ರಥಮ ವರ್ಧಂತ್ಯೋತ್ಸವ ಪ್ರಯುಕ್ತ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಶೃಂಗರಿಸಲಾಗಿದೆ ಸ್ವಾಗತ ಕಮಾನು ದೇವಾಲಯದ ದ್ವಾರ ನಂದಿ ಮಂಟಪ ಹಾಗೂ ದೇವಾಲಯದ ಪೌಳಿಯನ್ನು ವಿವಿಧ ಪ್ರಕಾರದ ಹೂವುಗಳಿಂದ ಅಲಂಕಾರಗೊಳಿಸಲಾಗಿದೆ ಶ್ರೀ ಮೈಲಾರೇಶ್ವರ ದೇವಸ್ಥಾನದ ಶೃಂಗಾರ ಕಾರ್ಯವನ್ನು ಮೂಕಾಂಬಿಕ ಡೆಕೋರೇಟರ್ಸ್ ಇದರ ಮಾಲಕರಾದ ಫಿಶ್ ಮಾರ್ಕೇಟ್ ರಸ್ತೆಯ ಜಯಪ್ರಕಾಶ್ (ಜೆಪಿ) ಇವರು ಸೇವಾ ಮನೋಭಾವನೆಯಿಂದ ನಡೆಸಿಕೊಟ್ಟಿದ್ದಾರೆ