Home » ಹಿಂದೂ ಧರ್ಮದ ವಲಸೆಯನ್ನು ತಡೆಯಬೇಕು
 

ಹಿಂದೂ ಧರ್ಮದ ವಲಸೆಯನ್ನು ತಡೆಯಬೇಕು

by Kundapur Xpress
Spread the love

ಹಿಂದೂ ಧರ್ಮದ ವಲಸೆಯನ್ನು ತಡೆಯಬೇಕು – ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು

ಹಳಗೇರಿ : ವಿವಿಧ ಕಾರಣಗಳಿಗಾಗಿ ಜನರು ಹಿಂದೂ ಧರ್ಮದಿಂದ  ಬೇರೆ ಕಡೆಗೆ ಆಕರ್ಷಿತರಾಗುತ್ತಿದ್ದಾರೆ, ವಿಶೇಷವಾಗಿ ಮಕ್ಕಳು ಹಿಂದೂ ಧರ್ಮವನ್ನು ತೊರೆಯುತ್ತಿದ್ದಾರೆ. ಇದನ್ನು ತಡೆಯುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅಭಿಪ್ರಾಯ ಪಟ್ಟರು.

ಇಲ್ಲಿಯ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಿಂದೂ ಧರ್ಮವನ್ನು ತೊರೆಯುತ್ತಿರುವುದಕ್ಕೆ ನಾನ ಕಾರಣಗಳಿರಬಹುದು ನಾನದನ್ನು ವಿವರಿಸಲು ಹೋಗುವುದಿಲ್ಲ ಆದರೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಗಾಗ ಆಯೋಜಿಸುತ್ತಾ, ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಮಕ್ಕಳಲ್ಲಿ ಧಾರ್ಮಿಕ ಶ್ರದ್ಧೆಯನ್ನು ಮೂಡಿಸಿದರೆ ಹಿಂದೂ ಧರ್ಮದ ಉತ್ಥಾನ ಸಾಧ್ಯ ಎಂದರು

ಸಭೆಯಲ್ಲಿ ಮಾತನಾಡಿದ ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಹುಟ್ಟಿವಾಗ ಬಡವ ಶ್ರೀಮಂತರಾಗಿ ಇರುವುದು ನಮ್ಮ ನಿಯಂತ್ರಣದಲ್ಲಿಲ್ಲ. ಆದರೆ ಸಾಯುವಾಗಲೂ ಬಡತನದಲ್ಲಿದ್ದರೆ ಅದು ನಮ್ಮ ವೈಫಲ್ಯವೇ ಸರಿ. ಅಭಿವೃದ್ಧಿ ಹೊಂದಲು ಸಾಧನೆ ಬೇಕು. ಅದಕ್ಕೆ ತಕ್ಕ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಕೋಟ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಆನಂದ್ ಸಿ ಕುಂದರ್, ಉದ್ಯಮಿಗಳಾದ ನಿತಿನ್ ನಾರಾಯಣ್ ಜಗದೀಶ್ ಶೆಟ್ಟಿ ಕುದ್ರಕೋಡು, ಕೊಲ್ಲೂರು ದೇವಸ್ಥಾನ ಸಮಿತಿಯ ಕೆ ಚಂದ್ರಶೇಖರ್ ಶೆಟ್ಟಿ ಇನ್ನಿತರರು ಪಾಲ್ಗೊಂಡಿದ್ದರು

   

Related Articles

error: Content is protected !!