152
ಕುಂದಾಪುರ : ಇಲ್ಲಿನ ಇತಿಹಾಸ ಪ್ರಸಿದ್ಧ ಪೇಟೆ ಶ್ರೀ ವೆಂಕಟರಮಣ ದೇವಳದ ಬ್ರಹ್ಮರಥೋತ್ಸವವು ಚೈತ್ರ ಶುದ್ಧ ನವಮಿಯಂದು ಭಾನುವಾರ ಸಡಗರ ಸಂಭ್ರಮದಿಂದ ಜರುಗಿತು.
ಶ್ರೀಸಂಸ್ಥಾನ ಕಾಶೀಮಠದ ಶ್ರೀಮದ್ ಸುಧೀಂದ್ರತೀರ್ಥ ಶ್ರೀಪಾದರು, ಕಾಶೀ ಮಠದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ದೇವರ ಬ್ರಹ್ಮರಥೋತ್ಸವ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು
ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಬಲಿಪ್ರದಾನ, ಬ್ರಹ್ಮರಥಾರೋಹಣ, ಸಂಜೆ ಬ್ರಹ್ಮರಥೋತ್ಸವ, ವಸಂತಪೂಜೆ ನೆರವೇರಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಆಡಳಿತ ಮೊಕ್ತಸರ ರಾಧಾಕೃಷ್ಣ ಶೆಣೈ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆದವು. ಜತೆ ಮೊತ್ತೇಸರರಾದ ಜನಾರ್ದನ ಮಲ್ಯ ಹಾಗೂ ತ್ರಿವಿಕ್ರಮ ಪೈ ಉಪಸ್ಥಿತರಿದ್ದರು
ದೇಶ ವಿದೇಶಗಳಿಂದ ಆಗಮಿಸಿದ ಭಕ್ತರು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಸಂಭ್ರಮದಿಂದ ರಥೋತ್ಸವದಲ್ಲಿ ಪಾಲ್ಗೊಂಡು ತೇರನ್ನು ಎಳೆಯುವ ಮೂಲಕ ಕೃತಾರ್ಥರಾದರು

