ಕುಂದಾಪುರ : ಕುಂಭಾಸಿಯ ಅನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಇದೇ ತಿಂಗಳ 16 ರಂದು ಬ್ರಹ್ಮರಥೋತ್ಸವ ಹಾಗೂ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗವು ನಡೆಯಲಿದ್ದು ಆ ಪ್ರಯುಕ್ತ ದೇವಾಲಯದಲ್ಲಿ ಇಂದಿನಿಂದ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ
ಇಂದು ದಿನಾಂಕ 13ರಂದು ಬುಧವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ತಿವಾಚನ, ಗಣಹೋಮ, ಅಥರ್ವಶೀರ್ಷ ಉಪನಿಷತ್ ಹೋಮ, ಸತ್ಯಗಣಪತಿ ವೃತ, ಮಹಾಪೂಜೆ, ರಾತ್ರಿ ರಂಗಪೂಜಾ, ಡೋಲಾರೋಹಣ, ಪಲ್ಲಕ್ಕಿ ಉತ್ಸವ ನಡೆಯಲಿದೆ
ದಿನಾಂಕ 14ರಂದು ಗುರುವಾರ ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ ಗಣಹೋಮ, ಸತ್ಯಗಣಪತಿ ವೃತ, ಮಹಾಪೂಜೆ, ರಾತ್ರಿ ಪುರಮೆರವಣಿಗೆ, ರಂಗಪೂಜಾ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ
ದಿನಾಂಕ 15ರಂದು ಶುಕ್ರವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿ ಜನನ, ಗಣಹೋಮ ರಾತ್ರಿ ಸುರಮರವಣಿಗೆ, ರಂಗಪೂಜೆ ಹಾಗೂ ಸುವರ್ಣ ಪಲ್ಲಕ್ಕಿ ಉತ್ಸವ ಜರುಗಲಿದೆ
ದಿನಾಂಕ 16ರಂದು ಶನಿವಾರ ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ “ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ಮತ್ತು ಬ್ರಹ್ಮರಥೋತ್ಸವ” ನಡೆಯಲಿದ್ದು ಸಂಜೆ ಗಂಟೆ 7.00ಕ್ಕೆ ರಥೋತ್ಸವ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ
ದಿನಾಂಕ 17ರಂದು ರವಿವಾರ ಪೂರ್ವಾಹ್ನ, ಚೂರ್ಣೋತ್ಸವ ಅವಭ್ರತ ಸ್ನಾನ ಮತ್ತು ವಸಂತಾರಾಧನೆ ನಡೆಯಲಿದೆ
ದಿನಾಂಕ: 13/12/2023 ರಿಂದ ದಿನಾಂಕ: 16/12/2023 ರ ವರೆಗೆ ಪ್ರತಿದಿನ ಅಪರಾಹ್ನ ಗಂಟೆ 3-30 ರಿಂದ 5.30 ರ ವರೆಗೆ ಭಜನಾ ಕಾರ್ಯಕ್ರಮ ಜರಗಲಿರುವುದು
ಸಾಂಸ್ಕ್ರತಿಕ ಕಾರ್ಯಕ್ರಮಗಳು
ದಿನಾಂಕ 13-12-2023 ಬುಧವಾರ ಸಂಜೆ ಗಂಟೆ 5.30 ರಿಂದ 7.00 ರವರೆಗೆ ಓಂಕಾರ ನಾಟ್ಯ ಬಳಗ ಹಂಗಳೂರು ಇವರಿಂದ ಕೋಲಾಟ ಭಜನಾ ನೃತ್ಯ ಜಾನಪದ ನೃತ್ಯ ರಾತ್ರಿ ಗಂಟೆ 7.00 ಕ್ಕೆ ಸರ್ವಪ್ರಿಯ ಮಹಿಳಾ ಯಕ್ಷ ಬಳಗ ಹೆರ್ಗ ಉಡುಪಿ ಇವರಿಂದ ಯಕ್ಷಗಾವ ಪ್ರಸಂಗ “ಕನಕಾಂಗಿ ಕಲ್ಯಾಣ”
ದಿನಾಂಕ: 14-12-2023 ಗುರುವಾರ ಸಂಜೆ ಗಂಟೆ 5.30ಕ್ಕೆ ದರ್ಪಣಾ ಸ್ಕೂಲ್ ಆಫ್ ಫರ್ಪಾಮಿಂಗ್ ಆರ್ಟ್ಸ್ ಉಡುಪಿ ಇವರಿಂದ ಭರತನಾಟ್ಯ” ರಾತ್ರಿ ಗಂಟೆ 7.30ಕ್ಕೆ ಶ್ರೀಮತಿ ಸಂಗೀತಾ ಬಾಲಚಂದ್ರ ಮತ್ತು ಬಳಗ ಉಡುಪಿ ಇವರಿಂದ ಭಕ್ತಿ ಭಾವ ಸುಗಮ ಸಂಗೀತ
ದಿನಾಂಕ: 15-12-2023 ಶುಕ್ರವಾರ ಸಂಜೆ ಗಂಟೆ 6.00 ಕ್ಕೆ “ಮ್ಯಾಜಿಕ್ ವಿಸ್ಮಯ ಹಾಗೂ ಮನರಂಜನೆ ಜಾದೂ ಕಾರ್ಯಕ್ರಮ” ಜಾದೂಗಾರ ಪಿ.ಎಸ್. ಹೆಗ್ಡೆ ಶಿವಮೊಗ್ಗ ಇವರಿಂದ
ದಿನಾಂಕ: 16-12-2023 ಶನಿವಾರ ಸಂಜೆ ಗಂಟೆ 5.00 ರಿಂದ ಸಾಲಿಗ್ರಾಮದ ಶ್ರೀ ಸತೀಶ್ ದೇವಾಡಿಗ ಮತ್ತು ಬಳಗದವರಿಂದ ಸ್ಯಾಕ್ರೋಫೋನ್ ವಾದನ” ರಾತ್ರಿ ಗಂಟೆ 9.30 ಕ್ಕೆ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ಯಕ್ಷಗಾನ ಬಯಲಾಟ ಪೌರಾಣಿಕ