139
ಕುಂದಾಪುರ : ಪುಷ್ಪ ಪವಾಡ ಕ್ಷೇತ್ರವೆಂಬ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವವು ನಾಳೆ ಫೆ.23ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ
ಫೆ.20ರಂದು ಅಗ್ನಿ ಜನನಾದಿ ಕರ್ಮಗಳು, ಮಯೂರ ವಾಹನೋತ್ಸವ ನೆರವೇರಿದ್ದು, ಫೆ. 21ರಂದು ಗಜ ವಾಹನೋತ್ಸವ, ಫೆ. 22ರಂದು ಅಶ್ವ ವಾಹನೋತ್ಸವ ನಡೆದು. ಫೆ. 23ರಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. ಫೆ.24ರಂದು ಚೂರ್ಣೋತ್ಸವ, ಫೆ.25ರಂದು ಅವಭ್ರಥ, ಧ್ವಜಾರೋಹಣಾದಿಗಳು ನಡೆಯಲಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸೌಕೂರು ಭಂಡಾರ್ರಮನೆ ಪಿ.ಕಿಶನ್ ಹೆಗ್ಡೆ ತಿಳಿಸಿದ್ದಾರೆ

