Home » ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ
 

ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ

by Kundapur Xpress
Spread the love

ಕುಂದಾಪುರ : ನಗರದಲ್ಲಿರುವ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಇಂದು ಬೆಳ್ಳಗೆ 9.00ರಿಂದ ಶತರುದ್ರಾಭೀಷೇಕ,ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು. ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ (ರಿ) ಇವರಿಂದ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ ಹಾಗೆ ರಾತ್ರಿ ಗಂಟೆ 9.30ರಿಂದ ಶ್ರೀ ಕುಂದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ ,ಪ್ರಸಾದ ವಿನಿಯೋಗ ನಡೆಯಲಿದೆ

ಸಾಂಕೃತಿಕ ಕಾರ್ಯಕ್ರಮವಾಗಿ ಸಂಜೆ ಗಂಟೆ 6..00ರಿಂದ 8.00ರವರೆಗೆ ಸ್ವರಾಂಜಲಿ ಮ್ಯೂಸಿಕಲ್ಸ್ ಕೋಟ ಮತ್ತು ಝಿ (Zee) ಕನ್ನಡ ಸ.ರಿ.ಗ.ಮ.ಪ. ಖ್ಯಾತಿಯ ಸಮೀಕ್ಷಾ ಸಾಲಿಗ್ರಾಮ ಇವರಿಂದ ಭಕ್ತಿ ಗಾನಾವಳಿ ಮತ್ತು ಭಕ್ತಿ ರಸಮಂಜರಿ,ರಾತ್ರಿ ಗಂಟೆ 8.00ರಿಂದ 10.00 ರವರೆಗೆ ನೃತ್ಯ ವಿದುಷಿ ಪ್ರವಿತಾ ಅಶೋಕ ಅವರ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೆ ತಾವು ಇಷ್ಟಮಿತ್ರರೊಡಗೂಡಿ ಬಂದು ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಶ್ರೀ ಕುಂದೇಶ್ವರ ಮತ್ತು ಪರಹಾರ ದೇವತೆಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ತಂತ್ರಿಗಳು,ಅರ್ಚಕರು,ಪದ ನಮಿತ್ತ ಅರ್ಚಕರು, ಎಸ್.ವಾಸುದೇವ ಯಡಿಯಾಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು.

 

Related Articles

error: Content is protected !!