ಕುಂದಾಪುರ: ಶ್ರೀ ಕ್ಷೇತ್ರ ಬಗ್ವಾಡಿಯ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಬ್ರಹ್ಮರಥೋತ್ಸವವು ಏಪ್ರಿಲ್ 6 ರಂದು ಗುರುವಾರ ಜರುಗಲಿದೆ. ಆ ಪ್ರಯುಕ್ತ ಏಪ್ರಿಲ್ 4 ರಿಂದ ಏಪ್ರಿಲ್ 8 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಉತ್ಸವಗಳು ನಡೆಯಲಿದೆ.
ಏಪ್ರಿಲ್ 4 ರಂದು ಸಂಜೆ 7.00 ಗಂಟೆಗೆ ಆಯ್ದ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ಜರುಗಲಿದೆ.ಏಪ್ರಿಲ್ 5 ರಂದು ಬುಧವಾರ 14ನೇ ವರ್ಷದ ಶ್ರೀದೇವಿಯ ವಿಜೃಂಭಣೆಯ ಪುರಮೆರವಣಿಗೆ ನಡೆಯಲಿದ್ದು, ಚಂಡೆ ಹಾಗೂ ವಾದ್ಯಗೋಷ್ಠಿಯೊಂದಿಗೆ ಕೀಲು ಕುದುರೆ, ಕರಗ ನೃತ್ಯ ಹಂಸ ನೃತ್ಯ ಯಕ್ಷಗಾನ ವಿಶಿಷ್ಟ ವೇಶ ಭೂಷಣಗಳ ಕುಣಿತದೊಂದಿಗೆ ಪುರಮೆರವಣಿಗೆ ನಡೆಯಲಿದೆ. ರಾತ್ರಿ 9.00 ರಿಂದ ವಿವಿಧ ವಿನೋದಾವಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 6 ರಂದು ಗುರುವಾರ ಬೆಳಿಗ್ಗೆ ಕುಣಿತ ಭಜನೆ ಹಾಗೂ ಭಜನೆ ನಡೆಯಲಿದ್ದು, ಮಧ್ಯಾಹ್ನ 1.00 ರಿಂದ ಧಾರ್ಮಿಕ ಸಭೆ ಜರುಗಲಿದೆ. ಏಪ್ರಿಲ್ 4 ರಿಂದ ಏಪ್ರಿಲ್ 8 ರವರೆಗೆ ಅನ್ನಸಂತರ್ಪಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ.