ಶತಾಯುರ್ವಜ್ರ ದೇಹಾಯ
ಸರ್ವ ಸಂಪತ್ಕರಾಯ ಚ|
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ ||
ನೂರು ವರ್ಷಆಯುಸ್ಸು – ವಜ್ರದಂತೆ ಧೃಢವಾದ ಶರೀರವಿರಲಿ. ಆಯುರಾರೋಗ್ಯ,ಸಕಲ ಸಂಪತ್ತು ಲಭಿಸಲಿ, ಸರ್ವರಿಷ್ಟನಾಶವಾಗಲಿ. ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ ಯುಗಾದಿಯಂದು ಬೇವು ಬೆಲ್ಲಗಳ ಮಿಶ್ರಣವನ್ನು ಭಕ್ಷಣೆ ಮಾಡಬೇಕು. ನಂತರ ಪಂಚಾಂಗ ಶ್ರವಣಮಾಡಬೇಕು.
ಈ ಸಂವತ್ಸರದಲ್ಲಿ
ಬೇವಿಗಿಂತಲೂ,ಸಿಹಿಯ ಬೆಲ್ಲದ ಸವಿ ಫಲಗಳೇ ಲಭಿಸಲಿ.
ಸರ್ವೇವೈ ಸುಖಿನಸ್ಸಂತು
ಸರ್ವೇಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ದುಃಖಭಾಗ್ಭವೇತ್ ||
ಎಲ್ಲರೂ ಸುಖವಾಗಿರಲಿ.
ಎಲ್ಲರೂ ಕಷ್ಟ-ತಾಪತ್ರಯಗಳಿಲ್ಲದೆ ನೆಮ್ಮದಿಯಿಂದ ಇರುವಂತಾಗಲಿ.
ಎಲ್ಲರಿಗೂ ಎಲ್ಲೆಡೆಗಳಿಂದ ಸಕಲ ಸನ್ಮಂಗಳವಾಗಲಿ
ಬ್ರಹ್ಮಾಂಡ ಪುರಾಣದ ಉಲ್ಲೇಖದ ಪ್ರಕಾರ,
ಯುಗಾದಿ ಹಬ್ಬದ ಆರಂಭದ ದಿನ ಚೈತ್ರಮಾಸದ ಮೊದಲ ದಿನಪಾಡ್ಯ ಯುಗಾದಿಯ ಆಚರಣೆ.
ಎರಡನೇ ದಿನವಾದ ಬಿದಿಗೆಯನ್ನು ವರುಷದ ತೊಡಕು ಎಂದು ಆಚರಿಸುವ ಪದ್ಧತಿ.ಆ ದಿನ ಚಂದ್ರನನ್ನು ದರುಶನ ಮಾಡಿದರೆ ವಿಶೇಷ ಫಲ.
ಮೂರನೇ ದಿನವಾದ ತದಿಗೆಯಂದು ಚೈತ್ರಗೌರಿಯ ಪೂಜೆಯ ಸಂಭ್ರಮ. ಈ ಮೂರು ದಿನಗಳು ಬಹಳ ಮಹತ್ವವನ್ನು ಪಡೆದಿವೆ.
ಕಾಲೇ ವರ್ಷಂತು ಪರ್ಜನ್ಯಃ
ಪೃಥಿವೀ ಸಸ್ಯ ಶಾಲಿನೀ |
ದೇಶೋsಯಂ ಕ್ಷೋಭ ರಹಿತಃ
ಸಾತ್ವಿಕಾಃ ಸಂತು ನಿರ್ಭಯಾಃ ||
ಸಕಾಲದಲ್ಲಿ ಸಾಕಷ್ಟು ಮಳೆ ಸುರಿಯಲಿ.
ಭೂಮಿಯು ಹಚ್ಚ ಹಸುರಿನಿಂದ ತುಂಬಿರಲಿ.
ಈ ದೇಶವು ಸುಭಿಕ್ಷವಾಗಲಿ .
ಸಾತ್ವಿಕ ಜೀವಗಳಿಗೆ ಭಯಭೀತಿ ದೂರವಾಗಲಿ
ಕ್ರೋಧಿ ಸಂವತ್ಸರದ ನವಶಕ್ತಿಯು ವಿಜೃಂಭಿಸಲಿ
ಚೈತ್ರ ಮಾಸಕ್ಕೆ ಸಾಕ್ಷಾತ್ ಮಹಾವಿಷ್ಣುವೇ ಅಧಿದೇವತೆಯಾಗಿರುವುದರಿಂದ ಯುಗಾದಿಯಿಂದ ಚೈತ್ರಮಾಸವಿಡೀ ವಿಷ್ಣುಸಹಸ್ರನಾಮ ಹೇಳಿಕೊಳ್ಳಿ.ಶ್ರವಣ ಮಾಡಿ. ಪಾರಾಯಣ ಮಾಡಿ,ಅನಂತ ಪುಣ್ಯ ಲಭ್ಯವಾಗುತ್ತದೆ.ವಿಷ್ಣುಸಹಸ್ರನಾಮ ಪವಿತ್ರಕ್ಕೆ ಪವಿತ್ರ , ಮಂಗಳಕ್ಕೆ ಮಂಗಳ, ಪಾವನಕ್ಕೆ ಪಾವನ.
ಸರ್ವರಿಗೂ ಕೋಧಿ ಸಂವತ್ಸರದ ಶುಭಾಶಯಗಳು
ಸ್ವರ್ಣಾನಂದ ಕುಂದಾಪುರ