Home » ವೆಂಕಟ್ರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ
 

ವೆಂಕಟ್ರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಪೇಟೆ ಶ್ರೀ ವೆಂಕಟ್ರಮಣ ದೇಗುಲದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಜರುಗುವ ಶ್ರೀ ದೇವರ ವಿಶ್ವರೂಪ ದರ್ಶನವು ಇಂದು ಭಾನುವಾರ ಬೆಳಿಗ್ಗೆ ಪ್ರಾತ: ಕಾಲದಲ್ಲಿ ವಿಜೃಂಭಣೆಯಿಂದ ಜರುಗಿತು

ದೇಗುಲದ ಪ್ರಧಾನ ಅರ್ಚಕರಾದ ಶ್ರೀ ಸತ್ಯಮೂರ್ತಿ ಭಟ್‌ ನೇತೃತ್ವದಲ್ಲಿ ನಡೆದ ವಿಶ್ವರೂಪ ದರ್ಶನದ ಸೇವಾ ಕಾರ್ಯಕ್ಕೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಯುತ ರಾಧಾಕೃಷ್ಣ ಶೆಣೈಯರು ದೀಪ ಪ್ರಜ್ವಲಿಸುವುದರ ಮೂಲಕ ಚಾಲನೆ ನೀಡಿದರು

ಮುಂಜಾನೆ 4.00 ಗಂಟೆಯಿಂದಲೇ ಶ್ರೀದೇವರ ವಿಶ್ವರೂಪ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತು ವಿಶ್ವರೂಪವನ್ನು ಕಣ್ತುಂಬಿಕೊಂಡರು

ದೇವಾಲಯದ ಸುತ್ತಲೂ ಹಣತೆಗಳಿಂದ ದೀಪಾಲಂಕಾರ ಮಾಡಲಾಗಿದ್ದು ಆವರಣದಲ್ಲಿ ಹಾಕಿದ ವಿವಿಧ ರೀತಿಯ ಆಕರ್ಷಕ ರಂಗೋಲಿಗಳು ಭಕ್ತರ ಮನ ಸೆಳೆಯಿತು

ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮೊಕ್ತೇಸರರಾದ ರಾಧಾಕೃಷ್ಣ ಶೆಣೈ ಜೊತೆ ಮೊಕ್ತೇಸರರಾದ ಜನಾರ್ಧನ ಮಲ್ಯ ಮತ್ತು ತ್ರಿವಿಕ್ರಮ್‌ ಪೈ ದೇಗುಲದ ಅರ್ಚಕ ವರ್ಗ ಹಾಗೂ ಸಿಬ್ಬಂದಿ ವರ್ಗದವರುಮತ್ತು ಭಕ್ತ ಸಮೂಹ ಉಪಸ್ಥಿತರಿದ್ದರು


 

Related Articles

error: Content is protected !!