ಕುಂದಾಪುರ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಯಾಗಿದೆ ದೇವಾಲಯ ಪ್ರವೇಶಿಸುವ ಭಕ್ತಾದಿಗಳಿಗೆ ಇನ್ನು ಮುಂದೆ ವಸ್ತ್ರ ಸಂಹಿತೆ ಕಡ್ಡಾಯವಾಗಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ. ದೇಗುಲಕ್ಕೆ ಪ್ರವೇಶಿಸುವ ಭಕ್ತರು ಯೋಗ್ಯವಾದ ಬಟ್ಟೆಗಳನ್ನು ಧರಿಸಿಯೇ ದೇವಳದ ಓಳಭಾಗವನ್ನು ಪ್ರವೇಶ ಮಾಡಬೇಕಾಗಿದೆ.
ಪುರುಷರು ಹಾಗೂ ಮಹಿಳಾ ಭಕ್ತರು ಬರ್ಮುಡ ತುಂಡು ಉಡುಗೆ (ಶಾಟ್ಸ್), ಟೋರ್ನ್ ಜೀನ್ಸ್ ಸ್ಕರ್ಟ್ ಸ್ಟೀವ್‌ಲೆಸ್ ಡ್ರೆಸ್ ಇತ್ಯಾದಿ ಉಡುಪುಗಳನ್ನು ಧರಿಸಿ ಭಕ್ತರಿಗೆ ದೇವಳದ ಒಳಗೆ ಪ್ರವೇ ಶಿಸುವುದನ್ನು ಕಡ್ಡಾಯವಾಗಿ ನಿಷೇಧಿ ಸಿಲಾಗಿದ್ದು, ಸನಾತನ ಹಿಂದು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಭಕ್ತಿ ಶ್ರದ್ಧೆಯಿಂದ ದೇವರ ದರ್ಶನ ಪಡೆಯಲು ಅವಕಾಶವಿದೆ ಎಂದು ದೇವಳದ ಆಡಳಿತ ಮೊಕ್ತೇಸರರಾದ ಶ್ರೀರಮಣ ಉಪಾಧ್ಯಾಯ ತಿಳಿಸಿದ್ದಾರೆ.