Home » ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನ : ಕಾರ್ತಿಕ ದೀಪೋತ್ಸವ
 

ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನ : ಕಾರ್ತಿಕ ದೀಪೋತ್ಸವ

ಯುವ ಮಿತ್ರ ವೃಂದ

by Kundapur Xpress
Spread the love

ಕುಂದಾಪುರ : ನಗರದ ಪಡುಕೇರಿಯ ಯುವ ಮಿತ್ರ ವೃಂದದ 30ನೇ ವಾರ್ಷಿಕೋತ್ಸವದ ಅಂಗವಾಗಿ ಈ ಬಾರಿ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮಕ್ಕೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಪಧಾದಿಕಾರಿಗಳು, ಮಹಿಳಾ ಮಂಡಳಿಯ ಅಧ್ಯಕ್ಷರು, ಪಧಾದಿಕಾರಿಗಳು ಮತ್ತು ಯುವ ಮಿತ್ರ ವೃಂದದ ಪಧಾಧಿಕಾರಿಗಳು ಮತ್ತು ಸದಸ್ಯರು ಹಾಗು ಪಡುಕೇರಿಯ ನಾಗರಿಕರು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು

ಮಕ್ಕಳು ಮಹಿಳೆಯರು ಎಲ್ಲರೂ ಒಟ್ಟಾಗಿ ದೀಪವನ್ನು ಹಚ್ಚಿ ಸಂಭ್ರಮಿಸಿದರು. ಹೂವಿನ ರಂಗೋಲಿ ಮತ್ತು ದೀಪದ ಅಲಂಕಾರದಲ್ಲಿ ದೇವಸ್ಥಾನವು ವಿಶೇಷವಾಗಿ ಕಂಗೊಳಿಸುತ್ತಿತ್ತು. ಪೂಜಾ ವಿಧಿ ವಿಧಾನದ ನಂತರ ಪ್ರಸಾದ ವಿತರಣಾ ಕಾರ್ಯಕ್ರಮವು ನಡೆಯಿತು ನಂತರ ಯುವ ಮಿತ್ರ ವೃಂದದ ವತಿಯಿಂದ ಸುಡು ಮದ್ದು ಪ್ರದರ್ಶನ ದೇವಸ್ಥಾನದ ಮಹಿಳಾ ಮಂಡಳಿಯವರಿಂದ ಶ್ರೀ ವಿಷ್ಣು ಸಹಸ್ರನಾಮದ ಸ್ತೋತ್ರ ಜಪ ಮತ್ತು ಭಗವದ್ಗೀತೆಯ ಪಠಣವು ನಡೆಯಿತು.

 

Related Articles

error: Content is protected !!