ಮುಂಬೈ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ವನಿತೆಯರ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 38 ರನ್‌ಗಳಿಂದ ಸೋಲು ಕಂಡಿದೆ. ಇಂಗ್ಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ವಾಂಖೆಡೆಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 197 ರನ್ ಕಲೆ ಹಾಕಿತು. ಭಾರತ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಸೋಫಿಯಾ ಡಂಕ್ಷಿ ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಅಲೈಸಿ ಕಾಪ್ಸ ಡಕೌಟ್ ಆದ್ರು, ಡೆನಿ ವ್ಯಾಟ್ (75 ರನ್) ಮತ್ತು ನಾಟ್ ಸ್ಕಿವರ್ (77ರನ್) ಮೂರನೇ ವಿಕೆಟ್‌ಗೆ 138 ರನ್ ಜತೆಯಾಟ ನೀಡಿ ಪದ್ಯಕ್ಕೆ ತಿರುವು ನೀಡಿದರು. ನಂತರ ಬಂದ ನಾಯಕಿ ಹೀಥರ್ ನೈಟ್ 6, ಆಮಿ ಜಾನ್ಸ್ 23, ಕೆಂಪ್ ಅಜೇಯ 5 ರನ್ ಗಳಿಸಿದರು. ಭಾರತ ಪರ ರೇಣುಕಾ ಸಿಂಗ್ 27ಕ್ಕೆ3, ಶ್ರೇಯಾಂಕ ಪಾಟೀಲ್ 44 ಕ್ಕೆ 2, ಸಾಯಿಕಾ ಇಷ್ಮ 38ಕ್ಕೆ 1 ವಿಕೆಟ್ ಪಡೆದರು.198 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಭಾರತ ವನಿತೆಯರು ಸ್ಮೃತಿ ಮಂಧನಾ (6ರನ್), ಜೆಮಿಮಾ ರಾಡ್ರಿಗಸ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಶೆಫಾಲಿ ಜತೆ ಹರ್ಮನ್ ಪ್ರೀತ್ 41 ರನ್ ಜತೆಯಾಟ ನೀಡಿದರು. 26 ರನ್ ಗಳಿಸಿದ್ದ ಹರ್ಮನ್ ಪ್ರೀತ್ ಎಕ್ಲಾಸ್ಟೋನ್ ಗೆ ವಿಕೆಟ್ ಒಪ್ಪಿಸಿದರು. ರಿಚಾ ಘೋಷ್ (21ರನ್) ಗ್ರೆನ್‌ಗೆ ಬಲಿಯಾದರು. ಶೆಫಾಲಿ ವರ್ಮಾ (52ರನ್) ಎಕ್ಲಾಸ್ಟೋನ್‌ಗೆ ಬಲಿಯಾದರು. ಕೊನೆಯಲ್ಲಿ ಕನಿಕಾ ಅಹುಜಾ 15, ಪೂಜಾ ವಸ್ತ್ರಾಕರ್ ಅಜೇಯ 11 ರನ್ ಗಳಿಸಿದರು. ದೀಪ್ತಿ ಶರ್ಮಾ ಅಜೇಯ 3 ರನ್ ಗಳಿಸಿದರು. ಇಂಗ್ಲೆಂಡ್ ಪರ ಸೋಫಿ ಎಕ್ಲಾಸ್ಟೋನ್ 3 ವಿಕೆಟ್ ಪಡೆದರು.