Home » ಇಂದಿನಿಂದ 2ನೇ ಟೆಸ್ಟ್‌ ಪಂದ್ಯ
 

ಇಂದಿನಿಂದ 2ನೇ ಟೆಸ್ಟ್‌ ಪಂದ್ಯ

by Kundapur Xpress
Spread the love

ಅಡಿಲೇಡ್ : ಪರ್ತನಲ್ಲಿ 10 ದಿನಗಳ ಹಿಂದೆ ಹೊರಬಿದ್ದ ಫಲಿತಾಂಶ ಹಲವರಲ್ಲಿ ಅಚ್ಚರಿ ಮೂಡಿಸಿದ್ದು ನಿಜ. ಆದರೆ ಭಾರತ ತನ್ನ ಘನತೆಗೆ ತಕ್ಕ ಆಟವಾಡಿ ಅರ್ಹ ಗೆಲುವು ಸಂಪಾದಿಸಿ 1-0 ಮುನ್ನಡೆ ಪಡೆಯಿತು. ಇದೀಗ ಹಿಂದಿನ ಪ್ರವಾಸದಲ್ಲಿ ಕೇವಲ 36 ರನ್‌ಗೆ ಆಲೌಟ್ ಆಗಿದ್ದ ಭಾರತ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾವನ್ನು 2ನೇ ಟೆಸ್ಟ್‌ನಲ್ಲಿ ಎದುರಿಸಲು ಸಜ್ಜಾಗಿದೆ. ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿರುವ ಪಂದ್ಯದ ಫಲಿತಾಂಶ 5 ಪಂದ್ಯ ಗಳ ಸರಣಿ ಸಾಗಲಿರುವ ದಿಕ್ಕನ್ನು ನಿರ್ಧರಿಸಲಿದೆ.

ಎರಡೂ ತಂಡಗಳು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿವೆಯಾದರೂ, ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಗಲಿರುವ ಬದಲಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 2ನೇ ಮಗು ನಿರೀಕ್ಷೆಯಲ್ಲಿದ್ದ ಕಾರಣ ಮೊದಲ ಟೆಸ್ಟ್‌ ಗೈರಾಗಿದ್ದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡಲಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ‘ಜೈಸ್ವಾಲ್ ಜೊತೆ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಾನು ಮಧ್ಯಮ ಕ್ರಮಾಂಕದಲ್ಲಿ ಎಲ್ಲೋ ಒಂದು ಕಡೆ ಆಡಲಿದ್ದೇನೆ’ ಎಂದರು

 

Related Articles

error: Content is protected !!