Home » ಆಸ್ಟ್ರೇಲಿಯಾಗೆ ದಾಖಲೆಯ ಜಯ
 

ಆಸ್ಟ್ರೇಲಿಯಾಗೆ ದಾಖಲೆಯ ಜಯ

by Kundapur Xpress
Spread the love

ಮ್ಯಾಕೆ : ಆಡಿದ ನಾಲ್ಕು ಬ್ಯಾಟಿಗರ ಪೈಕಿ ಆಸ್ಟ್ರೇಲಿಯಾದ ಮೂವರು ಬ್ಯಾಟರ್‌ಗಳು ಶತಕ ಒಬ್ಬ ಅರ್ಧ ಶತಕ ಬಾರಿಸಿದ್ದು, ದ.ಆಫ್ರಿಕಾ ವಿರುದ್ದದ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ದಾಖಲೆಯ ಗೆಲುವು ಸಾಧಿಸಿದೆ. ಈ ಹಿಂದೆ ನಡೆದ ಎರಡು ಪಂದ್ಯಗಳಲ್ಲಿ ಭಾರೀ ಸೋಲನುಭವಿಸಿರುವ ಆಸ್ಟ್ರೇಲಿಯಾ ಮ್ಯಾಕೆದಲ್ಲಿ ನಡೆದ ಪಂದ್ಯದಲ್ಲಿ ಬರೋಬ್ಬರಿ 276 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ಬರೆದಿದೆ. ಆದಾಗ್ಯೂ ದ.ಆಫ್ರಿಕಾ ಸರಣಿ ಗೆದ್ದುಕೊಂಡಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಹೆಡ್, ಮಾರ್ಷ್ ಹಾಗೂ ಗ್ರೀನ್ ಅವರ ಸ್ಪೋಟಕ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 2 ವಿಕೆಟ್‌ಗೆ 431 ರನ್ ಗಳಿಸಿತು. ಗುರಿ ಬೆನ್ನತ್ತಿದ ದ.ಆಫ್ರಿಕಾ ಕೇವಲ 155 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರೀ ಸೋಲೊಪ್ಪಿಕೊಂಡಿದೆ

 

Related Articles

error: Content is protected !!