ಕುಂದಾಪುರ : ಕುಂದಾಪುರ ನಗರದ ವಿಠಲ್ವಾಡಿಯ ನಿವಾಸಿಯಾದ ಸುಧಾಕರ ಪೂಜಾರಿ ಹಾಗೂ ಸವಿತಾ ದಂಪತಿಯ ಪುತ್ರಿಯಾದ ಸೃಜನಾ ಪೂಜಾರಿಯವರು ಹರಿಯಾಣದಲ್ಲಿ ಇದೇ ತಿಂಗಳ 19 ರಿಂದ 21 ರ ತನಕ ನಡೆಯಲಿರುವ ರಾಷ್ಟ್ರಮಟ್ಟದ ಟಿ-10 ಮಹಿಳೆಯರ ಕ್ರಿಕೆಟ್ ಚಾಂಪಿಯನ್ ಶಿಫ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹರ್ಯಾಣಕ್ಕೆ ತೆರಳುತ್ತಿದ್ದಾರೆ
ಆಲ್ ಇಂಡಿಯಾ ಸ್ಪೋರ್ಟ್ಸ್ ಕೌನ್ಸಿಲ್ ಆಫ್ ಡೆಪ್ ಆಯೋಜಿಸುವ ಪ್ರಥಮ ರಾಷ್ಟ್ರಮಟ್ಟದ ಟಿ-10 ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ
ಜನ್ಮತಃ ಕಿವಿಯೂ ಕೇಳದ ಬಾಯಿಯೂ ಬಾರದ ಪ್ರಸ್ತುತ ತನ್ನ ಆಸಕ್ತಿಯ ಬ್ಯೂಟಿಷಿಯನ್ ಕೋರ್ಸ್ ಮಾಡುತ್ತಿರುವ ಈಕೆ ಕಲಿಕೆಯ ಹಂತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಗಮನ ಸೆಳೆದಿದ್ದು ಕಲಿಕೆ ಚಿತ್ರಕಲೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾಳೆ ಇವಳ ಗಮನಾರ್ಹ ಸಾಧನೆಗೆ KUNDAPUR XPRESS ಸಾಮಾಜಿಕ ಜಾಲತಾಣದ ಸುದ್ದಿ ಪತ್ರಿಕೆಯು ಶುಭ ಹಾರೈಸಿದೆ