ಬೆಂಗಳೂರು: 20ನೇ ಓವರ್ನ ಮೊದಲ ಎಸೆತವನ್ನು ಎಂ.ಎಸ್.ಧೋನಿ ಕ್ರೀಡಾಂಗಣದ ಹೊರಕ್ಕೆ ಕಳುಹಿಸಿದ್ದು ಆರ್ಸಿಬಿ ಗೆಲುವಿಗೆ ನೆರವಾಯಿತು ಎಂದು ತಂಡದ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಂ ನಲ್ಲಿ ತಂಡವನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಅವರು, ‘ಧೋನಿ ಮೊದಲ ಎಸೆತದಲ್ಲಿ ಚೆಂಡನ್ನು ಸಿಕ್ಸರ್ ಮೂಲಕ ಕ್ರೀಡಾಂಗಣದ ಹೊರ ಕಳುಹಿಸಿದ್ದರಿಂದ ಅನುಕೂಲವೇ ಆಯಿತು. ಹೊಸ ಚೆಂಡು ತೇವಾಂಶ ಹೊಂದಿಲ್ಲದೆ ಇದ್ದಿದ್ದರಿಂದ ಯಶ್ ದಯಾಳ್ ಸರಿಯಾದ ಲೈನ್ ನಲ್ಲಿ ಬೌಲ್ ಮಾಡಲು ಸಹಕಾರಿಯಾಯಿತು’ ಎಂದು ಕಾರ್ತಿಕ್ ಹೇಳಿದ್ದಾರೆ