Home » ಭಾರತ ನ್ಯೂಜಿಲೆಂಡ್‌ ಫೈನಲ್‌ ಹಣಾಹಣಿ
 

ಭಾರತ ನ್ಯೂಜಿಲೆಂಡ್‌ ಫೈನಲ್‌ ಹಣಾಹಣಿ

by Kundapur Xpress
Spread the love

ಲಾಹೋರ್ : 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ ಟ್ರೋಫಿಯ ಫೈನಲ್‌ಗೆ ಅಖಾಡ ಸಿದ್ಧವಾಗಿದೆ. ಮಾ.9ರಂದು ದುಬೈನಲ್ಲಿ ನಡೆಯಲಿರುವ ಈ ಬಾರಿ ಟೂರ್ನಿಯ ಪ್ರಶಸ್ತಿ ಕದನದಲ್ಲಿ ಮಾಜಿ ಚಾಂಪಿಯನ್ ಗಳಾದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

ಭಾರತ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿತ್ತು. ಬುಧವಾರ ಲಾಹೋ‌ರ್ ಕ್ರೀಡಾಂಗಣದಲ್ಲಿ ನಡೆದ 2ನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 50 ರನ್ ಗೆಲುವು ಸಾಧಿಸಿತು. ನ್ಯೂಜಿಲೆಂಡ್ 3ನೇ ಬಾರಿ ಫೈನಲ್‌ ಪ್ರವೇಶಿಸಿದರೆ, ಚೋಕರ್ಸ್ ಹಣೆಪಟ್ಟಿ ಇರುವ ದ.ಆಫ್ರಿಕಾ ತಂಡದ 2ನೇ ಫೈನಲ್ ಕನಸು ಭಗ್ನಗೊಂಡಿತು.

 

Related Articles

error: Content is protected !!