Home » ಇಂದು ಭಾರತ ಪಾಕ್‌ ಕ್ರಿಕೆಟ್‌ ಸಮರ
 

ಇಂದು ಭಾರತ ಪಾಕ್‌ ಕ್ರಿಕೆಟ್‌ ಸಮರ

ಐಸಿಸಿ ಚಾಂಪಿಯನ್ಸ್ ಟ್ರೋಫಿ

by Kundapur Xpress
Spread the love

ದುಬೈ : ಕೇವಲ ಐಸಿಸಿ ಹಾಗೂ  ಏಷ್ಯಾ ಕ್ರಿಕೆಟ್ ಟೂರ್ನಿ ಗಳಲ್ಲಷ್ಟೇ ಸಿಗುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಮುಖಾಮುಖಿಗೆ ಇದೀಗ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಚಾಂಪಿಯನ್ಸ್‌ ಟ್ರೋಫಿಯ ಬಹುನಿರೀಕ್ಷಿತ ಪಂದ್ಯ ಇಂದು ಭಾನುವಾರ ನಡೆಯಲಿದ್ದು ಬದ್ಧವೈರಿಗಳ ಕದನ ಕ್ರಿಕೆಟ್ ಜಗತ್ತಿಗೆ ಕುತೂಹಲ ಕೆರಳಿಸಿದೆ. ಅದರಲ್ಲೂ ಟೂರ್ನಿಗೂ ಮುನ್ನ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವಿನ ತಿಕ್ಕಾಟ, ಈ ಪಂದ್ಯಕ್ಕೆ ಮತ್ತಷ್ಟು ಕಿಚ್ಚು ಹಚ್ಚಲಿದೆ.

ಬಿಸಿಸಿಐನಿಂದಾಗಿ ಭಾರತ-ಪಾಕ್ ಪಂದ್ಯ ದುಬೈಗೆ ಸ್ಥಳಾಂತರಗೊಂಡಿದೆ ಎನ್ನುವ ಸಿಟ್ಟು ಪಿಸಿಬಿಗಿದ್ದು ಟೊರ್ನಿಯಲ್ಲಿ ಚಾಂಪಿಯನ್ ಆಗದಿದ್ದರೂ ತೊಂದರೆಯಿಲ್ಲ, ಭಾರತ ವಿರುದ್ಧ ಗೆಲ್ಲಬೇಕು ಎನ್ನುವ ಮನಸ್ಥಿತಿಯಲ್ಲಿ ಪಾಕ್ ಆಟಗಾರರು ಇದ್ದರೂ ಅಚ್ಚರಿಯಿಲ್ಲ

ಇನ್ನು ಒಂದೆಡೆ ಟೂರ್ನಿಯಲ್ಲಿ ಶುಭಾರಂಭ ಮಾಡಿ ಸೆಮಿಫೈನಲ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತ. ಮತ್ತೊಂದೆಡೆ ತಾನೇ ಆತಿಥ್ಯ ವಹಿಸುತ್ತಿರುವ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ಹೊರಬೀಳುವ ಆತಂಕ ಎದುರಿಸುತ್ತಿರುವ ಪಾಕಿಸ್ತಾನ. ಈ ದೃಷ್ಟಿಕೋನವು ಪಂದ್ಯದ ರೋಚಕತೆಯನ್ನು ಹೆಚ್ಚಿಸಲಿದೆ.

ಸೂಪ‌ರ್ ಸ್ಟಾರ್‌ಗಳಿಂದ ಕೂಡಿರುವ ಭಾರತ ತಂಡ ಸಹಜವಾಗಿಯೇ ಗೆಲ್ಲುವ ಫೇವರಿಟ್ ಎನಿಸಿದರೆ, ತನ್ನ ವೇಗದ ಬೌಲಿಂಗ್ ಪಡೆಯ ಮೇಲೆ ಅತಿಯಾಗಿ ಅವಲಂಬಿತಗೊಂಡಿರುವ ಪಾಕಿಸ್ತಾನ, ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಆಘಾತ ನೀಡಲು ಹಪ ಹಪಿಸುತ್ತಿದೆ. ಭಾರತ ತಂಡದಲ್ಲಿ ಯಾವುದೇ ಬದಲಾ ವಣೆ ಆಗುವ ಸಾಧ್ಯತೆ ಕಡಿಮೆ. ಆದರೂ ಒಬ್ಬ ಎಡಗೈ ಸ್ಪಿನ್ನರ್ ಬದಲು ವಾಷಿಂಗ್ಟನ್‌ಗೆ ಸ್ಥಾನ ಸಿಗಬಹುದು

 

Related Articles

error: Content is protected !!