Home » ವಿಂಬಲ್ಡನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಸಿನ್ನರ್
 

ವಿಂಬಲ್ಡನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಸಿನ್ನರ್

ಸಿನ್ನರ್ ವಿಂಬಲ್ಡನ್ ವಿನ್ನರ್

by Kundapur Xpress
Spread the love

ಲಂಡನ್ : ಎರಡು ಬಾರಿಯ ವಿಂಬಲ್ಡನ್ ಹಾಲಿ ಚಾಂಪಿಯನ್ ಮತ್ತು ದ್ವಿತೀಯ ಶ್ರೇಯಾಂಕದ ಕಾರ್ಲೊಸ್ ಅಲ್ಕಾರಾಜ್‌ರನ್ನು ಮಣಿಸಿದ ವಿಶ್ವದ ನಂ.1 ಆಟಗಾರ ಜಾನಿಕ್ ಸಿನ್ನರ್ ತಮ್ಮ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟರು.

 ವಿಂಬಲ್ಡನ್ ಹುಲ್ಲುಹಾಸಿನ ಅಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಅಲ್ಕಾರಾಜ್‌ ವಿರುದ್ಧ ಸಿನ್ನರ್ ಫ್ರೆಂಚ್ ಓಪನ್ ಸೋಲಿನ ಸೇಡು ತೀರಿಸಿದರು. ಇದರೊಂದಿಗೆ ಸಿನ್ನ‌ರ್ ತಮ್ಮ ನಾಲ್ಕನೇ ಗ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆಗೈದರು. ಶಾಂತಚಿತ್ತರಾಗಿ ನಿಖರ ಹೊಡೆತಗಳೊಂದಿಗೆ ಅತ್ಯುತ್ತಮ ಟೆನಿಸ್ ಆಟವಾಡಿದ ಸಿನ್ನರ್ ಅರ್ಹವಾಗಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದರು. 

 

Related Articles

error: Content is protected !!