ಬ್ರಿಡ್ಜ್ಟೌನ್ : ಟೀಮ್ ಇಂಡಿಯಾ ವಿಶ್ವ ಸಾಮ್ರಾಟನಾಗಿ ಮೆರೆದಿದೆ ಸತತ 11 ವರ್ಷಗಳಿಂದ ಐಸಿಸಿ ಪ್ರಶಸ್ತಿ ಗೆಲ್ಲದೇ ಬರ ಎದುರಿಸಿದ್ದ ಟೀಮ್ ಇಂಡಿಯಾ ನಿಟ್ಟುಸಿರು ಬಿಡುವಂತಾಗಿದೆ 17 ವರ್ಷಗಳ ಬಳಿಕ ಎರಡನೆ ಟಿ-20 ವಿಶ್ವಕಪ್ ಗೆದ್ದು ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಜತೆಗೆ ಟಿ-20 ವಿಶ್ವಕಪ್ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.
ಹಾವು ಏಣಿ ಆಟದಂತಿದ್ದ ಟಿ20 ವಿಶ್ವಕಪ್ ಫೈನಲ್ನಲ್ಲಿ ಕೊನೆಯ 3 ಓವರ್ ಇಡೀ ಪಂದ್ಯದ ದಿಕ್ಕನ್ನೆ ಬದಲಿಸಿತು. ವೇಗಿ ಜಸ್ಟೀತ್ ಬುಮ್ರಾ ಪಂದ್ಯದ ಗತಿಯನ್ನೆ ಬದಲಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 7 ರನ್ ಗಳ ಅಂತರದಿಂದ ರೋಚಕ ಗೆಲುವು ಪಡೆದು ಟಿ-20 ಆವೃತ್ತಿಯ ನೂತನ ಚಾಂಪಿಯನ್ನಾಗಿ ಹೊರಹೊಮ್ಮಿತು. ಪಂದ್ಯ ಗೆಲ್ಲುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಕಣ್ಣೀರಿಟ್ಟರು
ವಿರಾಟ್ ಕೊಹ್ಲಿ ಫೈನಲ್ ಫಾರ್ಮ್ ಮರಳಿ ಪಡೆದು ನಾಯಕ ರೋಹಿತ್ ಶರ್ಮಾ ಅವರ ನಂಬಿಕೆ ಉಳಿಸಿಕೊಂಡರು. ಭಾವಾನತ್ಮಕವಾಗಿ ಇಡೀ ತಂಡ ಗೆಲುವನ್ನು ಸಂಭ್ರಮಿಸಿತು. ಜಗತ್ತಿನ ವಿವಿಧ ದೇಶಗಳಲ್ಲಿರುವ ನಮ್ಮ ಭಾರತೀಯರು ಗೆಲುವನ್ನು ಸಂಭ್ರಮಿಸಿದರು. ಟಿ-20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿರುವಾಗಲೇ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಆವೃತ್ತಿಗೆ ನಿವೃತ್ತಿ ಘೋಷಿಸಿ ಆಘಾತ ನೀಡಿದ್ದಾರೆ.