ಅಡಿಲೇಡ್ : ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿದ್ದ ಭಾರತ, ಅಡಿಲೇಡ್‌ನಲ್ಲಿ ಅಕ್ಷರಶಃ ಅಡಿಮೇಲಾಗಿದೆ ಫಲಿತಾಂಶಕ್ಕೆ ಸಂಪೂರ್ಣ ಉಲ್ಟಾ ಎಂಬಂತೆ ಅಡಿಲೇಡ್ ಟೆಸ್ಟ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಕಾಂಗರೂ ಪಡೆ 1-1 ಸಮಬಲ ಸಾಧಿಸಿದೆ
ಮೊದಲ ಟೆಸ್ಟ್‌ನ ಭರ್ಜರಿ ಗೆಲುವು ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದರೆ 2ನೇ ಪಂದ್ಯದ ಸೋಲು ತಂಡದ ದೌರ್ಬಲ್ಯಗಳನ್ನು ಹೊರಹಾಕಿದೆ. ಅತ್ತ ಆಸ್ಟ್ರೇಲಿಯಾ ಹಗಲು-ರಾತ್ರಿ ಟೆಸ್ಟ್‌ನಲ್ಲಿ ತನ್ನ ಪರಾಕ್ರಮ ಮುಂದುವರಿಸುವುದರ ಜೊತೆಗೆ ಉಳಿದ 3 ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಪರ್ತ್ ನಲ್ಲಿ ಸಿಕ್ಕಷ್ಟು ಸುಲಭವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.