Home » ವಿಶ್ವವಿನಾಯಕ : 18ನೇ ವಾರ್ಷಿಕ ಕ್ರೀಡಾಕೂಟ
 

ವಿಶ್ವವಿನಾಯಕ : 18ನೇ ವಾರ್ಷಿಕ ಕ್ರೀಡಾಕೂಟ

ವಿಶ್ವವಿನಾಯಕ ಆಂಗ್ಲ ಮಾಧ್ಯಮ ಶಾಲೆ

by Kundapur Xpress
Spread the love

ತೆಕ್ಕಟ್ಟೆ : ವಿಶ್ವವಿನಾಯಕ ನ್ಯಾಷನಲ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್‌ನ 18ನೇ ವಾರ್ಷಿಕ ಕ್ರೀಡೋತ್ಸವವು ಶಾಲೆಯ ಕ್ರೀಡಾಂಗಣದಲ್ಲಿ ಜರುಗಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜು ನಾವುಂದ ಇದರ ದೈಹಿಕ ಶಿಕ್ಷಕರಾದ ಜೀವನ್ ಕುಮಾರ್ ಶೆಟ್ಟಿ ಇವರು ಕ್ರೀಡೋತ್ಸವವನ್ನು ಉದ್ಗಾಟಿಸಿ ಮಾತನಾಡಿ ಕ್ರೀಡೆ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವುದರೊಂದಿಗೆ ಉತ್ತಮ ಸಾಧನೆ ಮಾಡಿದರೆ ಬದುಕನ್ನು ಕಟ್ಟಿಕೊಳ್ಳಬಹುದೆಂದು ತಿಳಿಸಿದರು. ಪ್ರತಿ ಕ್ರೀಡೆಗಳನ್ನು ವೈಜ್ಞಾನಿಕ ಸೂತ್ರಗಳೊಂದಿಗೆ ಅಭ್ಯಾಸ ಮಾಡಿದರೆ ಗೆಲುವು ನಿಶ್ಚಿತ ಎಂದು ತಿಳಿಸಿದರು

ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಂದೂರು ವಲಯದ ರೇಂಜ್ ಪೋರೆಸ್ಟ್ ಆಫಿಸರ್ ಸಂದೇಶ್ ಕುಮಾರ್‌ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಇದ್ದು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸಿದರು. ಶರೀರವನ್ನು ಸಧೃಢಗೊಳಿಸಲು ಶಾರೀರಿಕ ವ್ಯಾಯಾಮ ಬಹು ಮುಖ್ಯ ಎಂದು ಹೇಳಿದ ಅವರು ಕ್ರೀಡೆಯಲ್ಲಿ ಕಲೆ ಮತ್ತು ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಅಂಶಗಳು ಒಳಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು

ಶಾಲಾ ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಹೆಚ್‌ರವರು ಮಾತನಾಡಿ ಕ್ರೀಡೆಗಳು ಶಿಸ್ತು, ಸಂಯಮ ಹಾಗೂ ಏಕಾಗ್ರತೆಯನ್ನು ಕಲಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ ಪ್ರಭಾಕರ ಶೆಟ್ಟಿಯವರು ಮಕ್ಕಳ ಉತ್ಸಾಹ ಹಾಗೂ ಸ್ಪರ್ಧಾ ಮನೋಭಾವವನ್ನು ಪ್ರಶಂಸಿದರು

ವಿವಿಧ ಆಟೋಟ ಹಾಗೂ ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅತ್ಯುನ್ನತ ಅಂಕಗಳನ್ನು ಗಳಿಸಿ ಸ್ವರ್ಣ ಗ್ರೂಪ್‌ನ ವಿದ್ಯಾರ್ಥಿಗಳು 2024-25ನೇ ಸಾಲಿನ ಚಾಂಪಿಯನ್ ತಂಡವಾಗಿ ಟ್ರೋಫಿಯನ್ನು ತಮ್ಮ ದಾಗಿಸಿಕೊಂಡರು. ಕಾವೇರಿ ಗ್ರೂಪ್‌ನ ವಿದ್ಯಾರ್ಥಿಗಳು ಧ್ವಿತೀಯ ಸ್ಥಾನ ಗಳಿಸಿ ರನ್ನರ್ ಅಪ್ ಟ್ರೋಫಿಯನ್ನು ಪಡೆದರು

ಕಾರ್ಯಕ್ರಮದದಲ್ಲಿ ಶಾಲಾ ವಿದ್ಯಾರ್ಥಿಗಳು ಡ್ರಿಲ್, ಯೋಗ, ಲೇಜಿಮ್, ಡಂಬಲ್ಸ್, ಹೂಪ್ಸ್, ಕರಾಟೆ, ಪಿರಾಮಿಡ್ ಮೊದಲಾದ ಸಾಹಸ ಕ್ರೀಡೆಗಳನ್ನು ಪ್ರದರ್ಶಿಸಿದರು.ಸಮಾರಂಭದಲ್ಲಿ  ಶಾಲಾ ಪ್ರಾಂಶುಪಾಲರಾದ ನಿತಿನ್ ಡಿ ಆಲ್ಮೇಡಾರವರು,  ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು

ದೈಹಿಕ ಶಿಕ್ಷಕರುಗಳಾದ ಆನಂದ್ ಹಾಗೂ  ಪ್ರದೀಪ್ ಕುಮಾರ್ ಶೆಟ್ಟಿಯವರು ಕಾರ್ಯಕ್ರಮ ಸಂಘಟಿಸಿದರು ಶಿಕ್ಷಕಿಯರಾದ ನಾಗರತ್ನ ಹೆಬ್ಬಾರ್ ಹಾಗೂ ರೋಹಿಣಿ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕಿ ಸ್ಮಿತಾ ನಾಯಕ್ ಹಾಗೂ ಸಂಧ್ಯಾ ಆಚಾರ್ಯ ಸ್ವಾಗತಿಸಿ ಪರಿಚಯಿಸಿದರು, ಸುಷ್ಮಾ ಆರ್ ಹಾಗೂ ವಿನೋದ್ ವಂದಿಸಿದರು.

   

Related Articles

error: Content is protected !!