ದುಬೈ : ಮಹಿಳೆಯರ ಟಿ-20 ಪಂದ್ಯಾವಳಿ ಪ್ರಾರಂಭವಾಗಿದ್ದು, ಭಾರತ ತನ್ನ ಮೊದಲನೇ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ದ ಇಂದು ಆಡಲಿದೆ. ಟಿ-20 ವಿಶ್ವಕಪ್ ಗೆ ಸಜ್ಜಾಗಿ ನಿಂತಿರುವ ಕೌರ್ ಪಡೆಗೆ ಮೊದಲು ಕಿವೀಸ್ ಸವಾಲು ಹಾಕಲಿದೆ, ಗುಂಪು ಹಂತದಲ್ಲಿ ನಾಲ್ಕು ಪಂದ್ಯಗಳಿದ್ದು ಭಾರತ ತಂಡವು ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸೆಣಸಲಿದೆ. ಮಹಿಳೆಯರ ವಿಶ್ವಕಪ್ ಒಂದು ಸ್ಪರ್ಧಾತ್ಮಕವಾಗಿದ್ದು ಗುಂಪು ಹಂತದಿಂದಲೇ ಭಾರಿ ಪೈಪೋಟಿ ನಡೆಯುತ್ತದೆ ಹಾಗಾಗಿ ಭಾರತಕ್ಕೆ ಎಲ್ಲ ಪಂದ್ಯಗಳಲ್ಲೂ ಗೆಲುವು ಅನಿವಾರ್ಯವಿದ್ದು, ಮೊದಲ ಪಂದ್ಯದಿಂದಲೇ ಅಭಿಯಾನ ಆರಂಭಿಸುವ ವಿಶ್ವಾಸದಲ್ಲಿದೆ. ಈ ಹಿಂದಿನ ವಿಶ್ವಕಪ್ ಗಳಲ್ಲಿ ಭಾರತ 4 ಬಾರಿ ಸೆಮಿಸ್‌ಗೆ ತಲುಪಿ ಸೋಲುಂಡಿದೆ. ಅದರಲ್ಲೂ 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತಿತ್ತು. ಭಾರತ ಈ ಬಾರಿ ಪ್ರಶಸ್ತಿ ಗೆಲ್ಲುವ ಪಣತೊಟ್ಟಿದೆ.