ಕುಂದಾಪುರ : ಇಂದಿನಿಂದ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಪಂದ್ಯಾಟವು ಭಾರತದ ಆತಿಥ್ಯದಲ್ಲಿ ನಡಯಲಿದ್ದು ವಿಶ್ವಕಪ್ ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಡಲಿದೆ 46 ದಿನಗಳಲ್ಲಿ 10 ರಾಷ್ಟ್ರೀಯ ತಂಡಗಳು 48 ಪಂದ್ಯಗಳನ್ನು ಆಡಲಿದೆ ಭಾರತ ಆಸ್ಟ್ರೇಲಿಯಾ ಇಂಗ್ಲೆಂಡ್ ನೂಜಿಲ್ಯಾಂಡ್ ಶ್ರೀಲಂಕಾ ನೆದರ್ಲ್ಯಾಂಡ್ ಪಾಕಿಸ್ಥಾನ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ಥಾನಗಳು ಪ್ರಶಸ್ತಿಗಾಗಿ ಸೆಣಸಲಿದೆ
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ಆದ ವೆಸ್ಟ್ ಇಂಡೀಸ್ ತಂಡ ಈ ಬಾರಿ ವಿಶ್ವಕಪ್ ನಲ್ಲಿ ಅರ್ಹತೆ ಪಡೆದಿಲ್ಲ
ಈ ಬಾರಿ ಏಶ್ಯಾಕಪ್ ಕ್ರಿಕೆಟ್ ಪಂದ್ಯಾಟವು ದೇಶದ ವಿವಿಧ 10 ಮೈದಾನದಲ್ಲಿ ನಡೆಯಲಿದ್ದು ಫೈನಲ್ ಪಂದ್ಯಾಟವು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಒಟ್ಟು 46 ದಿನಗಳ ಕಾಲ ಕ್ರಿಕೆಟ್ ಪ್ರಿಯರಿಗೊಂದು ಕ್ರಿಕೆಟ್ ಹಬ್ಬದ ಸವಿಯೂಟ ಸಿಗಲಿದ್ದು ಈ ಬಾರಿಯ ವಿಶ್ವಕಪ್ ಕೀರೀಟ ಯಾರ ಮುಡಿಗೇರುವುದೆಂಬ ಕುತೂಹಲ ಮೂಡಿದೆ